ಬಾವಿಗೆ ಸೇರಿದ ಚರಂಡಿ ನೀರು

borewell
ಹಾಂದಿ ಗ್ರಾಮದಲ್ಲಿ ಬಾವಿ ನೀರು ಕಲುಷಿತಗೊಂಡಿದ್ದನ್ನು ಸ್ಥಳೀಯರು ವೀಕ್ಷಿಸಿದರು.
Published on

ಆಲ್ದೂರು: ಕೆಳಗೂರು ಗ್ರಾಮ ಪಂಚಾಯಿತಿ ಹಾಂದಿ ಗ್ರಾಮದ ಕೃಷ್ಣಪ್ಪ ಬಡಾವಣೆ, ಬಾಳೆಹಳ್ಳಿ ಗ್ರಾಮಗಳಿಗೆ ಕುಡಿಯುವ ನೀರಿನ ಮೂಲವಾಗಿದ್ದ ತೆರೆದ ಬಾವಿ ಕುಸಿದಿರುವ ಕಾರಣ ಕಲುಷಿತ ನೀರು ಸೇರ್ಪಡೆಯಾಗಿದ್ದು, ಜನರಿಗೆ ಅದೇ ನೀರು ಪೂರೈಕೆಯಾಗುತ್ತಿದೆ.

ಕೃಷ್ಣಪ್ಪ ಬಡಾವಣೆ ಹಾಗೂ ಬಾಳೆಹಳ್ಳಿ ಗ್ರಾಮದ ಸುಮಾರು 70 ಕುಟುಂಬಗಳಿಗೆ ತೆರೆದ ಬಾವಿಯಿಂದ ಕುಡಿಯುವ ನೀರು ಸರಬರಾಜಾಗುತ್ತಿದೆ. ಗ್ರಾಪಂನಿಂದ ಕೆರೆಯಲ್ಲಿ ತೆರೆದ ಬಾವಿ ತೋಡಿಸಿ ಅದರಿಂದ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ಈ ಬಾವಿಯ ತಳ ಕುಸಿದಿದ್ದರಿಂದ ಕಲುಷಿತ ನೀರು ಸೇರಿದೆ. ಕಲುಷಿತ ನೀರು ಸರಬರಾಜಾಗುತ್ತಿರುವ ಬಗ್ಗೆ ಗ್ರಾಮಸ್ಥರು ಗ್ರಾಪಂ ಗಮನಕ್ಕೆ ತಂದಿದ್ದು ಗ್ರಾಪಂನಿಂದ ವಾರದಲ್ಲಿ ಎರಡು ದಿನ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ತಕ್ಷಣ ಬಾವಿಯನ್ನು ದುರಸ್ತಿಪಡಿಸಿ ಸಮರ್ಪಕವಾಗಿ ನೀರು ಸರಬರಾಜು ಮಾಡಬೇಕು ಎಂದು ಕೃಷ್ಣಪ್ಪ ಬಡಾವಣೆ ಹಾಗೂ ಬಾಳೆಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net