ಒಳಚರಂಡಿ ವ್ಯವಸ್ಥೆ ಸಂಪರ್ಕ ಪಡೆಯಿರಿ

Published on

ಗಂಗಾವತಿ: ಆರೋಗ್ಯ ದೃಷ್ಟಿಯಿಂದ ನಗರದ ಸಾರ್ವಜನಿಕರು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ನಿರ್ಮಿಸಿರುವ ಒಳಚರಂಡಿ ವ್ಯವಸ್ಥೆಯ ಸಂಪರ್ಕ ಉಪಯೋಗಿಸುವಂತೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ್ದು, ಶೌಚಗೃಹದ ಮಲೀನ ನೀರನ್ನು ಚರಂಡಿಗೆ ಬಿಡುವುದು ಅಪರಾಧವಾಗಿದ್ದು, ಸಾಂಕ್ರಾಮಿಕ ರೋಗ ಹರಡುವಿಕೆಗೆ ಕಾರಣವಾಗುತ್ತದೆ. ಚರಂಡಿಯಲ್ಲಿ ನೀರನ್ನು ಪೌರ ಕಾರ್ಮಿಕರು ಸ್ವಚ್ಛಗೊಳಿಸುವುದು ಅಪರಾಧವಾಗಿದ್ದು, ಪೌರ ಕಾರ್ಮಿಕರ ಮೂಲಕ ಸ್ವಚ್ಛಗೊಳಿಸುವುದನ್ನು ಸುಪ್ರೀಂಕೋರ್ಟ್ ನಿಷೇಧಿಸಿದೆ.

ಸೆಪ್ಟಿಕ್ ಟ್ಯಾಂಕ್, ಇಂಗು ಗುಂಡಿಗಳನ್ನು ಬಳಸದೇ ಒಳಚರಂಡಿ ಸಂಪರ್ಕ ಪಡೆದುಕೊಳ್ಳಬೇಕಿದ್ದು, ಸಂಪರ್ಕಕ್ಕೆ 30ದಿನಗಳ ಗಡವು ನೀಡಲಾಗಿದೆ. ಶೌಚಗೃಹ, ಅಡುಗೆ ಮನೆ ಮಲಿನ ನೀರಿನ ಜತೆಗೆ ತ್ಯಾಜ್ಯಗಳನ್ನು ಚರಂಡಿಗೆ ನೇರವಾಗಿ ಬಿಡುವಂತಿಲ್ಲ.

ನೀರು ಹರಿಯುವ ಪೈಪ್‌ಗಳಿಗೆ ಜಾಲರಿ ಹಾಕಬೇಕಿದ್ದು, ತ್ಯಾಜ್ಯ ಸಂಗ್ರಹ ಚೇಂಬರ್ ನಿರ್ಮಿಸಿಕೊಳ್ಳಬೇಕು. ಒಳಚರಂಡಿ ಸಂಪರ್ಕ ಪಡೆಯದಿದ್ದರೆ ವಿದ್ಯುತ್ ಮತ್ತು ನೀರು ಪೂರೈಕೆ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net