ತರಬೇತಿಗೆ ಬಂದ ಅಧಿಕಾರಿಗಳನ್ನು ಒಳಚರಂಡಿ ಅವ್ಯಸ್ಥೆ ನೋಡಲು ಕಳಿಸಿದ ಶಾಸಕ ಸತೀಶ ಸೈಲ್‌

MLA-Satish-Sail-inaugurated-training-program
Published on

ಕಾರವಾರ: ತರಬೇತಿಗೆ ಬಂದ ಅಧಿಕಾರಿಗಳನ್ನು ಶಾಸಕ ಸತೀಶ ಸೈಲ್‌ ಒಳಚರಂಡಿ ಅವ್ಯವಸ್ಥೆ ನೋಡಲು ಕಳಿಸಿದ ಘಟನೆ ಶನಿವಾರ ನಡೆಯಿತು. ನಗರ ಜಿಪಂ ಹಾಗೂ ತಾಪಂ ಕಚೇರಿಗಳ ಎದುರು ಒಳಚರಂಡಿ ಉಕ್ಕಿ ಹರಿಯುತ್ತಿದ್ದು, ಅದರ ನೀರು ಚರಂಡಿ ಮೂಲಕ ಸಮುದ್ರ ಸೇರುತ್ತಿದೆ. ಕುಡಿಯುವ ನೀರಿಗೆ ಸೇರ್ಪಡೆಯಾಗುತ್ತಿದೆ. ಈ ಅವ್ಯವಸ್ಥೆಯನ್ನು ಸರಿ ಮಾಡಲು ಕ್ರಮ ವಹಿಸಿ ಎಂದು ಸೂಚಿಸಿದರು. ನೋಡಿಬನ್ನಿ ಎಂದು ಶಾಸಕ ಅಽಕಾರಿಗಳಿಗೆ ಸೂಚನೆ ನೀಡಿ ಕಳಿಸಿದರು. ಶಾಸಕರ ಸೂಚನೆಯಂತೆ ಅಧಿಕಾರಿಗಳು ಅಲ್ಲಿಗೆ ತೆರಳಿ ಪರಿಶೀಲಿಸಿದರು.

ಶುದ್ಧ ನೀರು ಒದಗಿಸಿ:

ಜನರಿಗೆ ಶುದ್ಧ ನೀರು ಒದಗಿಸಲು ಕ್ರಮ ವಹಿಸಬೇಕು ಎಂದು ಶಾಸಕ ಸತೀಶ ಸೈಲ್ ಹೇಳಿದರು.
ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಕುಡಿಯುವ ನೀರು ಗುಣಮಟ್ಟ ಪರೀಕ್ಷೆ ಮತ್ತು ಕಾಮಗಾರಿಗಳ ಅಂದಾಜು ಪತ್ರಿಕೆ ಸಿದ್ಧಪಡಿಸುವ ಕುರಿತ ಒಂದು ದಿನದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನಿಗೆ ನೀರು, ವಿದ್ಯುತ್, ಸಾರಿಗೆ ಈ ಮೂರು ಸೌಕರ್ಯಗಳು ಅತಿ ಮುಖ್ಯ. ಅದರಲ್ಲೂ ನೀರು ಇಲ್ಲದೆ ಮನುಷ್ಯ ಬದುಕಲು ಸಾಧ್ಯವಿಲ್ಲ. ಅಂತಹದರಲ್ಲಿ ಕಲುಷಿತವಾದಂತಹ ನೀರು ಜನರು ಸೇವಿಸಬಾರದು ಎನ್ನುವ ಉದ್ದೇಶದಿಂದ ತರಬೇತಿ ಆಯೋಜಿಸಲಾಗಿದೆ ಎಂದರು.
ಜಿಪಂ ಸಿಇಒ ಈಶ್ವರ ಕಾಂದೂ ಮಾತನಾಡಿ, ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಮಳೆ ಬರುತ್ತಿರುವುದರಿಂದ ನೀರಿಗೆ ಸಂಬAಽಸಿದ ರೋಗಗಳು ಹರಡದಂತೆ, ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪರೀಕ್ಷೆಗಾಗಿ ಈಗಾಗಲೇ ಎಫ್‌ಟಿಕೆ ಕಿಟ್ ವಿತರಣೆ ಮಾಡಲಾಗಿದೆ ಅವುಗಳನ್ನು ಬಳಸಿಕೊಂಡು ಕುಡಿಯುವ ನೀರಿನ ಗುಣಮಟ್ಟವನ್ನು ಪರೀಕ್ಷೆ ಮಾಡಿ ಎಂದು ಅಽಕಾರಿಗಳಿಗೆ ಸೂಚಿಸಿದರು.
ಎಫ್.ಟಿ.ಕೆ ಕಿಟ್ ಬಳಸಿಕೊಂಡು ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆ ಬಗ್ಗೆ ತರಬೇತಿ ನೀಡಲಾಯಿತು. ಜಿಪಂ ಉಪ ಕಾರ್ಯದರ್ಶಿ ನಾಗೇಶ ರಾಯ್ಕರ್, ಡಿಎಚ್‌ಒ ಡಾ.ನೀರಜ್ ಬಿ.ವಿ., ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇ ರಾಜೀವ ನಾಯ್ಕ, ಎಇಇ ಎಸ್.ಪಿ.ಬಾಂದೇಕರ್, ತಾಪಂ ಇಒ ಜಿ.ಸತೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net