

ಹುಬ್ಬಳ್ಳಿ: ಇಲ್ಲಿಯ ಸರ್ ಸಿದ್ದಪ್ಪ ಕಂಬಳಿ (ಲ್ಯಾಮಿಂಗ್ಟನ್ ರೋಡ್) ಮಾರ್ಗದಲ್ಲಿ ಅದು ಕೂಡ ಮಹಾನಗರ ಪಾಲಿಕೆ ಮುಖ್ಯ ಕಚೇರಿ ಹತ್ತಿರದಲ್ಲೇ ಒಳಚರಂಡಿವೊಂದು ಬ್ಲಾಕ್ ಆಗಿ ರಸ್ತೆಯಲ್ಲಿ ಹರಿಯುತ್ತಿದ್ದು, ವಾತಾವರಣ ಗಬ್ಬೆದ್ದು ಹೋಗಿದೆ.
ಕಳೆದ ಒಂದು ವಾರದಿಂದ ಈ ಸಮಸ್ಯೆ ಉದ್ಭವಿಸಿದ್ದು, ಜೋಶಿ ಪೆಟ್ರೋಲ್ ಪಂಪ್ ಎದುರು ರಸ್ತೆಯಲ್ಲೇ ಕೊಳಚೆ ಸಂಗ್ರಹವಾಗಿದೆ. ಇದರಿಂದ ವಾಹನಗಳು ಕೊಳಕಿನ ಮೇಲೆ ಹಾಯ್ದು ಹೋಗಬೇಕು.
ಪಾದಚಾರಿಗಳು, ಬೈಕ್ ಸವಾರರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ.
ಲಕ್ಷ್ಮಣರಾವ್ ಪೈಕೋಟಿ ಲ್ಯಾಮಿಂಗ್ಟನ್ ಶಾಲೆ ಕಾಂಪೌಂಡ್ ಬಳಿಯೇ ಒಳಚರಂಡಿ ಬ್ಲಾಕ್ ಆಗಿ ಅಲ್ಲಿ ಮಕ್ಕಳು ಹೋಗದಂತಹ ಸ್ಥಿತಿ ಇದೆ.
ಸಮಸ್ಯೆ ಬಗ್ಗೆ ಮಹಾನಗರ ಪಾಲಿಕೆಗೆ ದೂರು ನೀಡಿ ನಾಲ್ಕೈದು ದಿನ ಕಳೆದರೂ ಯಾರೊಬ್ಬರೂ ಪರಿಹಾರ ಮಾಡಿಲ್ಲ.
ಮಹಾನಗರ ಪಾಲಿಕೆ ಮುಖ್ಯ ಕಚೇರಿ ಹತ್ತಿರವೇ ಜನರು ಇಷ್ಟೊಂದು ಸಮಸ್ಯೆ ಎದುರಿಸುತ್ತಿದ್ದರೂ ಆಡಳಿತ ವ್ಯವಸ್ಥೆ ಸ್ಪಂದಿಸುತ್ತಿಲ್ಲ. ಇನ್ನು ಉಳಿದ ಕಡೆ ಹೇಗೋ ಎಂದು ಜನರು ಪ್ರಶ್ನಿಸುವಂತಾಗಿದೆ.