ಚರಂಡಿಯ ಡೆಕ್‌ಗಳು ಕುಸಿತ

01-GPT-2A
ಗುಂಡ್ಲುಪೇಟೆ ತಾಲೂಕಿನ ರಂಗೂಪುರ ಗ್ರಾಮದಲ್ಲಿ ಚರಂಡಿಗಳ ಡೆಕ್‌ಗಳು ಕುಸಿದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
Published on

ಗುಂಡ್ಲುಪೇಟೆ: ತಾಲೂಕಿನ ರಂಗೂಪುರ ಗ್ರಾಮದಲ್ಲಿ ಚರಂಡಿಯ ಡೆಕ್‌ಗಳು ಕುಸಿದು ಜಾನುವಾರುಗಳು ಕಾಲು ಮುರಿತಕ್ಕೊಳಗಾಗುತ್ತಿದ್ದರೂ ಗ್ರಾಮ ಪಂಚಾಯಿತಿಯವರು ನಿರ್ಲಕ್ಷೃ ವಹಿಸಿದ್ದು, ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಹೊರೆಯಾಲ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಸೇರಿದ ಗ್ರಾಮದಲ್ಲಿ ಹಳೆಯ ಕಾಲದ ಚರಂಡಿಗಳ ಮೇಲೆ ನಿರ್ಮಿಸಿದ ಡೆಕ್‌ಗಳು ಶಿಥಿಲವಾಗಿವೆ. ಈ ರಸ್ತೆಗಳಲ್ಲಿ ಅಧಿಕ ಭಾರದ ವಾಹನಗಳ ಸಂಚಾರದಿಂದ ಹಲವು ಕಡೆ ಡೆಕ್‌ಗಳು ಕುಸಿದಿದ್ದು, ಜನ, ಜಾನುವಾರುಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿವೆ.
ಡೆಕ್ ಕುಸಿತದಿಂದ ಈ ರಸ್ತೆಗಳಲ್ಲಿ ಜನ, ಜಾನುವಾರು ಸಂಚರಿಸುವುದು ತುಂಬ ಕಷ್ಟಕರವಾಗಿದೆ. ಈಗಾಗಲೇ ಡೆಕ್ ಕುಸಿದ ಭಾಗದಲ್ಲಿ ಸಿಲುಕಿದ ನಾಲ್ಕಾರು ಜಾನುವಾರುಗಳ ಕಾಲು ಮೂಳೆ ಮುರಿದಿವೆ. ಈ ಭಾಗದ ನಿವಾಸಿಗಳು ತಮ್ಮ ಮಕ್ಕಳನ್ನು ಮನೆಗಳಿಂದ ಹೊರಗೆ ಕಳುಹಿಸಲು ಹೆದರುತ್ತಿದ್ದಾರೆ.

ಈ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯಿತಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಎಚ್ಚೆತ್ತು ಡೆಕ್ ಬದಲಿಸಿ ಮುಂದಾಗಬಹುದಾದ ಅನಾಹುತ ತಡೆಯಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net