

ಬೀಳಗಿ: ರೈತರು ಈಗಾಗಲೇ ಹಿಂಗಾರಿ ಬೆಳೆಗಳಾದ ಜೋಳ, ಗೋಧಿ, ಮಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಮೂರು ನದಿಗಳು ಹಾಯ್ದರೂ ನೀರಾವರಿಯಲ್ಲಿ ಹಿನ್ನಡೆ ಆಗುತ್ತಿದೆ. ಆದ್ದರಿಂದ ಕೂಡಲೇ ನೀರಾವರಿ ಸಮಿತಿಯವರು ಕಾಲುವೆಗೆ ನೀರು ಹರಿಸುವ ಕೆಲಸ ಮಾಡಬೇಕೆಂದು ಭಾರತೀಯ ಕಿಸಾನ ಸಂಘದ ಜಿಲ್ಲಾಧ್ಯಕ್ಷ ವೀರುಪಾಕ್ಷಯ್ಯ ಹಿರೇಮಠ ಒತ್ತಾಯಿಸಿದರು.
ಸ್ಥಳೀಯ ಜಿಎಲ್‌ಜಿ ಐಬಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರು ಸಲಹಾ ಸಮಿತಿಯವರು ನ. 15 ರೊಳಗಾಗಿ ಹಿಡಕಲ್ ಡ್ಯಾಂ, ನವೀಲುತೀರ್ಥ ಡ್ಯಾಂ ನಿಂದ ನೀರು ಬಿಡಬೇಕಾಗಿತ್ತು. ಆದರೂ ಇಲ್ಲಿತನಕ ಬಿಟ್ಟಿಲ್ಲ. ಇದರಿಂದ ಬಿತ್ತನೆ ಮಾಡಿದ ಬೆಳಗಳು ನೀರಿಲ್ಲದೆ ಒಣಗುವ ಸ್ಥಿತಿಗೆ ತಲುಪಲಿವೆ. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೋಳಿ ಅವರು ರೈತರ ಸಮಸ್ಯೆಗಳಿಗೆ ಪರಿಹಾರ ನೀಡಲು ಕಾಲುವೆಗಳಿಗೆ ನೀರು ಹರಿಯುವ ಕೆಲಸ ಮಾಡಿ ರೈತರ ಹಿತ ಕಾಯಬೇಕು ಎಂದರು. ನೀರು ಹಿರುವ ಕಾಲುವೆಗಳಲ್ಲಿ ಸ್ವಚ್ಛತೆ ಮಾಡಿ ರೈತರ ಗಡಿ ಭಾಗದವರೆಗೆ ನೀರು ಹರಿಬೇಕು ಎಂದು ಒತ್ತಾಯಿಸಿದರು.
ಭಾರತೀಯ ಕಿಸಾನ ಸಂಘದ ಜಿಲ್ಲಾಕೋಶ್ಯಾಧ್ಯಕ್ಷ ಎಂ.ವೈ. ವಡವಾಣಿ, ಸುಬ್ಬರಾಯಗೌಡ ಪಾಟೀಲ ಇದ್ದರು.