ವಾಸ್ಕೋದಲ್ಲಿ ಹಳಿ ತಪ್ಪಿದ ಬೋಗಿ

IMG_20240724_211441_259.jpg
Published on

ಹುಬ್ಬಳ್ಳಿ: ವಾಸ್ಕೋ ಡ ಗಾಮಾ ರೈಲು ನಿಲ್ದಾಣದಲ್ಲಿ ಖಾಲಿ ರೈಲು ಬೋಗಿಯೊಂದು ಹಳಿ ತಪ್ಪಿದ ಟನೆ ಬುಧವಾರ ನಡೆದಿದೆ.

ಬೋಗಿ ಹಳಿ ತಪ್ಪಿದ್ದರಿಂದ ಹಲವು ರೈಲುಗಳ ಸಂಚಾರ ಪೂರ್ಣ ಹಾಗೂ ಭಾಗಶಃ ರದ್ದು ಪಡಿಸಲಾಗಿದೆ.

ವಾಸ್ಕೋ ಡ ಗಾಮಾ ಕುಲೆಮ್ ಡೆಮು ಸ್ಪೆಷಲ್ ರೈಲು ಸಂಪೂರ್ಣ ರದ್ದಾಗಿದೆ. ಕುಲೆಮ್& ವಾಸ್ಕೋ ಡ ಗಾಮಾ ರೈಲನ್ನು ಮಡಗಾಂವ ಹಾಗೂ ವಾಸ್ಕೋ ಮಧ್ಯೆ ಭಾಗಶಃ ಸಂಚಾರ ರದ್ದು ಪಡಿಸಲಾಗಿದೆ. ವಾಸ್ಕೋ ಡ ಗಾಮಾ- ಪಾಟ್ನಾ ಎಕ್ಸಪ್ರೆಸ್ ರೈಲಿನ ವೇಳೆಯನ್ನು ಪರಿಷ್ಕರಣೆ ಮಾಡಿ 120 ನಿಮಿಷ ತಡವಾಗಿ ಚಲಿಸಲು ಅನುವು ಮಾಡಿಕೊಡಲಾಯಿತು.

ಹಳಿ ತಪ್ಪಿದ ಪ್ರದೇಶಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೋಗಿಯನ್ನು ಹಳಿಗೆ ತರುವ ಕಾರ್ಯ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net