

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲೆಯ ಎಲ್ಲ ವಿಧಾನಸಭಾ ಮತಕ್ಷೇತ್ರಗಳ ಮತದಾರರ ಕರಡು ಪಟ್ಟಿಯನ್ನು ಜಿಲ್ಲಾಽಕಾರಿ ದಿವ್ಯ ಪ್ರಭು ಮಂಗಳವಾರ ಪ್ರಕಟಿಸಿದ್ದಾರೆ. ಹು-ಧಾ ಪೂರ್ವ, ಸೆಂಟ್ರಲ್, ಪಶ್ಚಿಮ ಕ್ಷೇತ್ರಗಳ ಪಟ್ಟಿಯನ್ನು ಮಹಾನಗರ ಪಾಲಿಕೆ ಆಯುಕ್ತರ ಕಚೇರಿ ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿಯಲ್ಲಿ ಪ್ರಕಟಿಸಲಾಗಿದೆ. ನವಲಗುಂದ, ಕುಂದಗೋಳ, ಧಾರವಾಡ, ಕಲಘಟಗಿ ಕ್ಷೇತ್ರಗಳ ಪಟ್ಟಿಯನ್ನು ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಸೀಲ್ದಾರರ ಕಚೇರಿಗಳಲ್ಲಿ ಮತ್ತು ಎಲ್ಲ ಗ್ರಾಮ ಪಂಚಾಯಿ, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಮುಖ್ಯ ಚುನಾವಣಾಽಕಾರಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಅ. 29ರಿಂದ ನ. 28ರವರೆಗೆ ಮತದಾರರ ಪರಿಶೀಲನೆಗಾಗಿ ಲಭ್ಯ ಇದ್ದು, ಆಕ್ಷಪಣೆ ಸಲ್ಲಿಸಲು ಅವಕಾಶ ಇರುತ್ತದೆ. ಹೊಸದಾಗಿ ಹೆಸರು ಸೆರ್ಪಡೆ ಮತ್ತು ಹೆಸರು ತೆಗೆದು ಹಾಕಲು, ವಿಳಾಸ ಬದಲಾವಣೆಗೆ ತಹಸೀಲ್ದಾರ್ ಕಚೇರಿ ಸಂಪರ್ಕಿಸಬೇಕು. ಅಂತಿಮ ಮತದಾರರ ಪಟ್ಟಿಯನ್ನು 2025ರ ಜ. 6ರಂದು ಪ್ರಕಟಿಸಲಾಗುವುದು ಎದು ಜಿಲ್ಲಾಽಕಾರಿ ತಿಳಿಸಿದ್ದಾರೆ.