

ಬಸವನಬಾಗೇವಾಡಿ: ಕನ್ನಡ ಸಾಹಿತ್ಯ ತನ್ನ ಶ್ರೀಮಂತಿಕೆ, ವೈಭವ ಉಳಿಸಿಕೊಂಡಿದ್ದರ ಹಿಂದೆ ವಚನ ಸಾಹಿತ್ಯದ ಪಾತ್ರ ತುಂಬಾ ಮಹತ್ವದ್ದಾಗಿದೆ ಎಂದು ಬಿ.ಎಲ್.ಡಿ.ಇ. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎ.ವಿ. ಸೂರ್ಯವಂಶಿ ಹೇಳಿದರು.
ಬುಧವಾರ ಪಟ್ಟಣದ ವಿಜಯಪುರ ರಸ್ತೆಯ ಬಿ.ಎಲ್.ಡಿ.ಇ. ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಚನ ಪಿತಾಮಹ ಡಾ. .ಗು. ಹಳಕಟ್ಟಿಯವರ ಜನ್ಮ ದಿನಾಚರಣೆ ನಿಮಿತ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರ ಮನೆ ಬಾಗಿಲಿಗೆ, ಗುಡಿ ಗುಂಡಾರಗಳಿಗೆ ಭೇಟಿ ನೀಡಿ ವಚನಗಳ ಕಟ್ಟನ್ನು ಪಡೆದು ಅವೆಲ್ಲವುಗಳನ್ನು ಸಂಪಾದಿಸಿ, ಸರಳೀಕರಣಗೊಳಿಸಿ ನಮಗೆ ನೀಡಿರುವುದರಿಂದ 12ನೇ ಶತಮಾನದಲ್ಲಿ ಬಸವಾದಿ ಶರಣರು ಹೇಳಿರುವ ವಿಚಾರಗಳು 21ನೇ ಶತಮಾನದಲ್ಲಿಯೂ ಕಲ್ಪವಕ್ಷ ,ಕಾಮಧೇನುವಿನಂತೆ ನಮ್ಮ ಬದುಕಿಗೆ ದಾರಿದೀಪಗಳಾಗಿವೆ ಎಂದು ಹೇಳಿದರು.
ಪ್ರತಿಯೊಬ್ಬರು ವಚನ ಸಾಹಿತ್ಯವನ್ನು ಅಧ್ಯಯನ ಮಾಡಿದಾಗ ನಮ್ಮ ಬದುಕು ಆದರ್ಶಪ್ರಾಯವಾಗುತ್ತದೆ. ಬಸವನಾಡಿನವರಾದ ನಾವೆಲ್ಲರೂ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ. ಸದಾಕಾಲ ಸಮಾಜ ಸೇವೆಯಲ್ಲಿಯೇ ತಮ್ಮ ಸರಳ ಜೀವನ ನಡೆಸಿದ ಡಾ. .ಗು. ಹಳಕಟ್ಟಿಯವರು ನಮಗಷ್ಟೇ ಅಲ್ಲ ಇಡೀ ನಾಡಿಗೆ ಆದರ್ಶಪ್ರಾಯರು. ಸಮಾಜಕ್ಕಾಗಿ ಬ್ಯಾಂಕ್, ಶಾಲೆಗಳನ್ನು ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಯನ್ನು ಸ್ಥಾಪಿಸಿ ಅಕ್ಷರ ಕ್ರಾಂತಿಗೆ ನಾಂದಿಹಾಡಿದ ನಿಜರತ್ನ ಹಳಕಟ್ಟಿಯವರಾಗಿದ್ದಾರೆ ಎಂದು ಹೇಳಿದರು.
ನ್ಯಾಕ್ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಸಿ.ಪಿ. ಧಡೇಕರ, ಐ.ಕ್ಯೂ.ಎ.ಸಿ. ಹಾಗೂ ರಾಜ್ಯಶಾಸದ ಮುಖ್ಯಸ್ಥ ಪ್ರೊ. ಡಿ.ಎನ್. ಕೊನಂತಲಿ, ಎನ್.ಎಸ್.ಎಸ್. ಹಾಗೂ ಸಮಾಜಶಾಸದ ಮುಖ್ಯಸ್ಥ ಡಾ. ವೈ.ಬಿ. ನಾಯಕ, ಅರ್ಥಶಾಸ ವಿಭಾಗದ ಮುಖ್ಯಸ್ಥ ಡಾ. ರವೀಂದ್ರಗೌಡ ಕೆ, ವಿದ್ಯಾರ್ಥಿ ಒಕ್ಕೂಟ ಮತ್ತು ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಡಿ.ಎಸ್. ಲಗಳಿ, ಪ್ರೊ. ಎಸ್.ಜೆ. ಸೂರ್ಯವಂಶಿ, ಪ್ರೊ. ಪಿ.ಎಸ್. ನಾಟಿಕಾರ, ಪ್ರೊ. ಜಯರಾಮರೆಡ್ಡಿ, ಪ್ರೊ. ಎಂ.ಆರ್. ಮಮದಾಪೂರ, ಪ್ರೊ. ಪಿ.ಎಸ್. ಹೊರಕೇರಿ, ಡಾ. ಎಸ್.ಬಿ. ಜನಗೊಂಡ, ಪ್ರೊ. ಆರ್.ಎನ್. ರಾಠೋಡ ಹಾಗೂ ಎಲ್ಲ ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.