

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಪ್ರಸಿದ್ಧ ಆರ್ಥೊಪಿಡಿಷಿಯನ್ ಡಾ. ವಿವೇಕ ಪಾಟೀಲ ಟೈ-ಹುಬ್ಬಳ್ಳಿ ಶಾಖೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಗಿರೀಶ ಮಾನೆ, ಕಾರ್ಯದರ್ಶಿಯಾಗಿ ನಾಗರಾಜ ಕೊಟಗಿ ಹಾಗೂ ಖಜಾಂಚಿಯಾಗಿ ಆರ್ಕಿಟೆಕ್ಟ್ ಜಿತೇಂದ್ರ ನಾಯಕ ಆಯ್ಕೆಯಾಗಿದ್ದಾರೆ.
60 ದೇಶಗಳಲ್ಲಿ ಅಸ್ತಿತ್ವದಲ್ಲಿರುವ ಟೈ ಸಂಸ್ಥೆ ಜಾಗತಿಕ ಔದ್ಯೋಗಿಕ ಹಾಗೂ ವಾಣಿಜ್ಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಟೈ-ಹುಬ್ಬಳ್ಳಿ ಶಾಖೆಯು ಅನೇಕ ವರ್ಷಗಳಿಂದ ಈ ಭಾಗದ ಔದ್ಯೋಗಿಕ ಹಾಗೂ ವಾಣಿಜ್ಯ ಅಭಿವೃದ್ಧಿಗಾಗಿ ಅನೇಕ ರಚನಾತ್ಮಕ ಕ್ರಮಗಳನ್ನು ಕೈಗೊಂಡಿದೆ. ಹೆಸರಾಂತ ವಾಣಿಜ್ಯೋದ್ಯಮಿಗಳನ್ನು ಆಹ್ವಾನಿಸಿ ವಿಚಾರ ಸಂಕಿರಣ ಹಾಗೂ ತಾಂತ್ರಿಕ ಗೋಷ್ಠಿಗಳನ್ನು ಆಯೋಜಿಸಿಕೊಂಡು ಬಂದಿದೆ.
ಹೊಸ ದೃಷ್ಟಿಕೋನ ಹಾಗೂ ಕ್ರಿಯಾತ್ಮಕ ಧೋರಣೆ ಹೊಂದಿರುವ ಡಾ. ವಿವೇಕ ಪಾಟೀಲ ಹು-ಧಾ ಅವಳಿ ನಗರದಲ್ಲಿ ಕೈಗಾರಿಕಾ ಬೆಳವಣಿಗೆ ಹಾಗೂ ಸ್ಮಾರ್ಟಅಪ್ ಉದ್ಯೋಗಕ್ಕೆ ಇನ್ನಷ್ಟು ಉತ್ತೇಜನ ನೀಡುವ ಗುರಿ ಇಟ್ಟುಕೊಂಡಿದ್ದಾರೆ.