ಡಾ. ವಿಜಯ ಸಂಕೇಶ್ವರ ಜತೆ ಎನ್​ಆರ್​ಐಗಳ ಸಂವಾದ ಇಂದು

CMD
Published on

ಹುಬ್ಬಳ್ಳಿ: ವಿವಿಧ ದೇಶಗಳಲ್ಲಿನ ಭಾರತೀಯರು ರಚಿಸಿಕೊಂಡಿರುವ ಎನ್​ಆರ್​ಐ ಕನ್ನಡ ಬಳಗವು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್, ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರೊಂದಿಗೆ ಅ.24ರಂದು ಸಂವಾದ ಏರ್ಪಡಿಸಿದೆ. ಭಾರತೀಯ ಕಾಲಮಾನ ಶನಿವಾರ ಸಂಜೆ 4ರಿಂದ ನಡೆಯಲಿರುವ ಸಂವಾದದಲ್ಲಿ ಕತಾರ್, ಕುವೈತ್, ಇಥಿಯೋಪಿಯಾ, ಫಿನ್​ಲ್ಯಾಂಡ್, ಸೌದಿ ಅರೇಬಿಯಾ, ಯುಎಇ, ಓಮನ್, ಇಂಡೋನೇಷ್ಯಾ, ಮಲೇಷ್ಯಾ, ಸಿಂಗಾಪುರ, ಸಿಡ್ನಿ, ನ್ಯೂಜಿಲೆಂಡ್, ಕೆನಡಾ ಮತ್ತಿತರ ಕಡೆಯ ಕನ್ನಡಿಗರು ಪಾಲ್ಗೊಳ್ಳಲಿದ್ದಾರೆ.

ಜೂಮ್ ಆ್ಯಪ್​ ಮೂಲಕ ನಡೆಯಲಿರುವ ಈ ಸಂವಾದದಲ್ಲಿ ಪ್ರಶ್ನೆ ಕೇಳುವವರು ಹೇಗೆ ಭಾಗವಹಿಸಬೇಕು, ಎಷ್ಟು ಕಡಿಮೆ ಸಮಯದಲ್ಲಿ ಪ್ರಶ್ನೆ ಕೇಳಬೇಕು ಎನ್ನುವುದು ಸೇರಿ ವಿವಿಧ ಸೂಚನೆಗಳನ್ನು ಸದಸ್ಯರಿಗೆ ಈಗಾಗಲೆ ತಿಳಿಸಲಾಗಿದೆ ಎಂದು ಎನ್​ಆರ್​ಐ ಕನ್ನಡ ಬಳಗದ ಪದಾಧಿಕಾರಿಗಳಾದ ರಾಜೀವ ಕೆ. ಮೇತ್ರಿ (ಅಮೆರಿಕ), ಈಶ್ವರ ಶೇಗುಣಶಿ (ಐರ್ಲೆಂಡ್), ನವೀನ ಅಪ್ಪಾಜಿಗೋಳ (ಜರ್ಮನಿ) ತಿಳಿಸಿದ್ದಾರೆ.

ಸಂವಾದದಲ್ಲಿ ಭಾಗವಹಿಸುವವರು ನೋಂದಾಯಿಸಿಕೊಳ್ಳಲು ಈ ಕೆಳಗಿನ ಲಿಂಕ್ ಸಂಪರ್ಕಿಸಲು ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net