

ಹುಬ್ಬಳ್ಳಿ: ಅಂತಾರಾಷ್ಟ್ರೀಯ ಹಿಂದು ಪರಿಷತ್, ರಾಷ್ಟ್ರೀಯ ಬಜರಂಗದಳ ಆಶ್ರಯದಲ್ಲಿ ‘ಸ್ವಾಸ್ಥ್ಯ ಹಿಂದು, ಸುರಕ್ಷಿತ ಹಿಂದು, ಸಮೃದ್ಧ ಹಿಂದು’ ಸಂಕಲ್ಪದೊಂದಿಗೆ ಹುಬ್ಬಳ್ಳಿಯಲ್ಲಿ ಸೋಮವಾರ ಏರ್ಪಡಿಸಿದ್ದ ಹಿಂದು ಚಿಂತನಾ ಸಭೆಗೆ ಆಗಮಿಸಿದ ಅಂತಾರಾಷ್ಟ್ರೀಯ ಹಿಂದು ಪರಿಷತ್ ಸಂಸ್ಥಾಪಕ ಅಧ್ಯಕ್ಷ ಡಾ. ಪ್ರವೀಣ ಭಾಯಿ ತೊಗಾಡಿಯಾ ಅವರನ್ನು ಯುವ ಮುಖಂಡ, ವಿಎಕೆ ಫೌಂಡೇಷನ್ ಅಧ್ಯಕ್ಷ ವೆಂಕಟೇಶ ಕಾಟವೆ ಅವರು ಬರಮಾಡಿಕೊಂಡರು.
ಶ್ರೀರಾಮ ಸೇನಾ ಜಿಲ್ಲಾಧ್ಯಕ್ಷರು ಅಣ್ಣಪ್ಪ ದೀವಟಿಗಿ, ಮುಖಂಡರಾದ ಪ್ರವೀಣ ಮಾಳದಕರ, ಪ್ರವೀಣ ಪವಾರ, ಹನುಮಂತಸಾ ನಿರಂಜನ, ಅಮೃತ ಸೋಳಂಕಿ, ಅಂಬಾಸಾ ಕಾಟವೆ ಪ್ರಮುಖರು ಉಪಸ್ಥಿತರಿದ್ದರು.