

ಮೈಸೂರು: ಸಾವರ್ಕರ್ ಪ್ರತಿಷ್ಠಾನ ಮೈಸೂರು ವತಿಯಿಂದ ನಗರದ ಕಲಾಮಂದಿರಲ್ಲಿ ಗುರುವಾರ ಆಯೋಜಿಸಿದ್ದ ಸಾವರ್ಕರ್ ಜಂುಂತಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಂದೇ ಮಾತರಂ ಪಾಠ ಶಾಲೆಯ ಸಂಸ್ಥಾಪಕ, ಲೇಖಕ ಡಾ. ಜಿ.ಬಿ.ಹರೀಶ ಅವರಿಗೆ ವೀರ ಸಾವರ್ಕರ್ ಸವ್ಮಾನ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಜಿ.ಬಿ. ಹರೀಶ, ಬಾಲಗಂಗಾಧರ ತಿಲಕ್ ಅವರ ಪ್ರೇರಣೆಯಿಂದ ಸಾವರ್ಕರ್ ಅವರು ಬಾಲ್ಯದಲ್ಲಿಯೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ತಮ್ಮ ಕ್ರಾಂತಿಕಾರಿ ಹೋರಾಟದಿಂದ ಬ್ರಿಟಿಷರನ್ನು ದೇಶದಿಂದ ತೊಲಗುವಂತೆ ಮಾಡಿದರು ಎಂದರು.
ಹಿಂದುತ್ವವನ್ನು ಮನುಕುಲದ ಸ್ಛೂರ್ತಿ ಮತ್ತು ಚೈತನ್ಯದ ಸೆಲೆಂಾಗಿ ಸಾವರ್ಕರ್ ಗುರುತಿಸಿದ್ದಾರೆ. ಹಿಂದುತ್ವದಿಂದಲೇ ಹಿಂದುಸ್ತಾನ ಉಳಿದಿದೆ ಎಂಬುದು ಸಾವರ್ಕರ್ ಅವರ ಅಭಿಪ್ರಾಯವಾಗಿತ್ತು.. ಅವರಿಗೆ ಹಿಂದುತ್ವ ಎಂಬುದು ಒಂದು ಪದವಲ್ಲ, ಅದು ಇತಿಹಾಸ. ಇಸ್ಲಾಂನ ಖಡ್ಗದ ಹೊಡೆತದಿಂದ ಹಲವು ರಾಷ್ಟ್ರಗಳು ರಾಷ್ಟ್ರವಾಗಿಯೇ ಉಳಿಯಲಿಲ್ಲ. ಆದರೆ, ಹಿಂದುಗಳು ಎಲ್ಲ ದಾಳಿಗಳನ್ನು ಎದುರಿಸಿಕೊಂಡು ಬಂದರು. ಹಿಂದುತ್ವವೇ ಈ ದೇಶದ ಆತ್ಮ ಎಂದರು.
ಸ್ವಾತಂತ್ರ್ಯ ಕಾಲಘಟ್ಟದಲ್ಲಿ ‘ನೆಹರು ಗ್ರೇಟ್, ಸಾವರ್ಕರ್ ಬ್ರಿಟಿಷರ ಏಜೆಂಟ್’ ಎಂದು ಅಪಪ್ರಚಾರ ವಾಡಲಾಯಿತು. ಕೇವಲ ಸ್ವಾತಂತ್ರ್ಯ ಕಾಲಘಟ್ಟದಲ್ಲಿ ವಾತ್ರವಲ್ಲ ಇಂದಿಗೂ ಸಾವರ್ಕರ್ ವಿರುದ್ಧ ಅಪಪ್ರಚಾರ ನಿಂತಿಲ್ಲ. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ‘ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ಇಂದಿರಾಗಾಂಧಿ ಪ್ರಜಾಪ್ರಭುತ್ವ ಪರವಾದ ವ್ಯಕ್ತಿ, ನರೇಂದ್ರ ಮೋದಿ ಪ್ರಜಾಪ್ರಭುತ್ವ ವಿರೋಧಿ’ ಎಂದು ಬಿಂಬಿಸುವ ಕಾಂರ್ುವೂ ನಡೆಂುುತ್ತಿದೆ ಎಂದು ಅಸವಾಧಾನ ವ್ಯಕ್ತಪಡಿಸಿದರು.
ದೇಶದ ವಿರುದ್ಧ ಸಂಚು ರೂಪಿಸುವವರು ದೇಶವನ್ನು ವಿಭಜಿಸುವ ಹಂತಕ್ಕೂ ತಲಪಿದ್ದಾರೆ. ದೇಶವನ್ನು ದಕ್ಷಿಣ ಭಾರತ ಹಾಗೂ ಉತ್ತರ ಭಾರತ ಎಂದು ವಿಭಜಿಸುವ ಚಿಂತನೆ ಬಿತ್ತುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಭಾರತವನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲದೆ ಇದ್ದರೆ ಕನಿಷ್ಠ ದಕ್ಷಿಣ ಭಾರತವನ್ನು ಕಸಿಂುುವ ಎಂಬ ಆಲೋಚನೆಂುನ್ನು ಭಾರತ ವಿರೋಧಿಗಳು ವಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ಸಂದರ್ಭ ಕ್ರಾಂತಿಯಿಂದ ಜೈಲಿಗೆ ಹೋಗುವ ಪರಿಸ್ಥಿತಿ ನಿರ್ವಾಣವಾಯಿತು. ಇದು ಸಾಕಷ್ಟು ಜನರಿಗೆ ಸಂಕಷ್ಟವನ್ನು ತಂದೊಡ್ಡಿತು. ಆ ಸಂದರ್ಭ ದೇಶಕ್ಕೆ ಬಂದ ಮಹಾತ್ಮಗಾಂಧಿ ಅವರು ಅಹಿಂಸಾತ್ಮಕ ಹೋರಾಟ ಪರಿಚಯಿಸಿದರು. ಇದು ಕೆಲವು ಕ್ರಾಂತಿಕಾರಿಗಳಿಗೆ ಇಷ್ಟವಾಯಿತು. ಬ್ರಿಟಿಷರಿಗೂ ಅದೇ ಬೇಕಾಕಿತ್ತು ಎಂದು ಹೇಳಿದರು
ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್, ಶ್ರೀ ಶಿವಬಸಪ್ಪ ಸ್ವಾಮೀಜಿ, ಸಾವರ್ಕರ್ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಂುಶಸ್ವಿನಿ, ಸಾವಾಜಿಕ ಚಿಂತಕ ಡಾ.ಚಂದ್ರಶೇಖರ್, ಶಾಸಕ ಟಿ.ಎಸ್. ಶ್ರೀವತ್ಸ , ವಾಜಿ ಶಾಸಕ ಎಲ್. ನಾಗೇಂದ್ರ, ವಾಜಿ ಮೇಂುರ್ ಶಿವಕುವಾರ್, ಮುಡಾ ಮಾಜಿ ಅಧ್ಯಕ್ಷ ಂುಶಸ್ವಿ ಸೋಮಶೇಖರ್, ನಗರ ಪಾಲಿಕೆ ವಾಜಿ ಸದಸ್ಯ ಬಿ.ವಿ. ಮಂಜುನಾಥ್, ಪ್ರಮುಖರಾದ ರಾಕೇಶ್ ಭಟ್, ಶಿವಕುವಾರ್ ಚಿಕ್ಕಕಾನ್ಯ, ಸಂದೇಶ್ ಹಾಗೂ ಇತರರು ಇದ್ದರು.