

ಬೆಳಗಾವಿ: ತಾಲೂಕಿನ ಹೊನಗಾ ಗ್ರಾಮದ ಡಾ.ರವಿ ಪಾಟೀಲ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ದ್ರವ್ಯಗುಣ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಉಮಾಕಾಂತ ರಬ್ಬ್ ಅವರಿಗೆ ಮಹಾರಾಷ್ಟ್ರದ ನಾಗಪುರದ ವಿ.ಆಚಾರ್ಯ ಪ್ರಿಯವ್ರತ ಶರ್ಮಾ ಸ್ಮಾರಕದಿಂದ ಅತ್ಯುತ್ತಮ ದ್ರವ್ಯಗುಣ ಶಾಸಜ್ಞ (ಪಾರ್ಮಕಾಲಜಿಸ್ಟ್) ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ವಿಶ್ವ ಆಯುರ್ವೇದ ದಿನದ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಡಾ.ಸುಭಾಷ್ ವಾಘ್ ಹೆಲ್ತ್, ಮಾನವೀಯತೆ ೌಂಡೇಷನ್ ಮತ್ತು ಧನ್ವಂತರಿ ಜಯಂತಿ ಸಮಿತಿ ವತಿಯಿಂದ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಕರ್ನಾಟಕದಿಂದ ದ್ರವ್ಯಗುಣ(ಪಾರ್ಮಕಾಲಜಿ) ವಿಭಾಗದಲ್ಲಿ ಆಯ್ಕೆಯಾದ ಏಕೈಕ ವೈದ್ಯ ಡಾ. ಉಮಾಕಾಂತ್ ರಬ್ಬ್ ಅವರಾಗಿದ್ದಾರೆ. ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಹಾರಾಷ್ಟ್ರ ವೈದ್ಯಕೀಯ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿ ದಿನೇಶ ವಾಘ್ಮಾರೆ, ಸಾಂಸ್ಕೃತಿಕ ಸಮಿತಿ ಸದಸ್ಯ ಡಾ.ಬಾಬಾ ನಂದನಪಾವಾರ್ ಪ್ರಶಸ್ತಿ ಪ್ರದಾನ ಮಾಡಿ, ನಗದು ಬಹುಮಾನ, ಸ್ಮರಣಿಕೆ, ಪ್ರಶಸ್ತಿ ಪ್ರಮಾಣ ಪತ್ರ ನೀಡಿ ಗೌರವಿಸಿದರು.