ಡಾ.ಟಿಎಂಎ ಪೈ ದತ್ತಿ ನಿಧಿಗೆ ಇಬ್ಬರು ಸಂಶೋಧಕರ ಆಯ್ಕೆ

udp-16-dattinidhi
Published on

ಉಡುಪಿ: ಮಾಹೆ ಆಡಳಿತಕ್ಕೆ ಒಳಪಟ್ಟ ಬೆಂಗಳೂರಿನ ಸೃಷ್ಟಿ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಆಂಡ್ ಟೆಕ್ನಾಲಜಿಯ ಡಾ. ಗುರುರಾಜ್ ಕೆ.ವಿ. ಹಾಗೂ ಡಾ.ದೀಪ್ತ ಸತೀಶ್ ಅವರಿಗೆ ಪ್ರತಿಷ್ಠಿತ ಡಾ.ಟಿಎಂಎ ಪೈ ದತ್ತಿ ನಿಧಿಯನ್ನು ಘೋಷಿಸಲಾಗಿದೆ.

ಪಶ್ಚಿಮ ಘಟ್ಟಗಳಲ್ಲಿ ಕಪ್ಪೆಗಳ ಕುರಿತಂತೆ ಸಂಶೋಧನೆ ನಡೆಸುತ್ತಿರುವ ಅಕಾಡೆಮಿಕ್ ಡೀನ್ ಡಾ.ಗುರುರಾಜ್ ಕೆ.ವಿ. ಅವರು ಮಾನವ ನಿರ್ಮಿತ ಹವಾಮಾನ ಬದಲಾವಣೆಯಿಂದ ಕಪ್ಪೆ ಹಾಗೂ ನೆಲಗಪ್ಪೆಗಳ ಶ್ರವಣಗುಣದ ಮೇಲಾಗುವ ಪರಿಣಾಮಗಳ ಕುರಿತು ಪ್ರಯೋಗ ನಡೆಸಲು ಅತ್ಯಾಧುನಿಕ ಪ್ರಯೋಗಶಾಲೆ ನಿರ್ಮಿಸುವ ಗುರಿಯೊಂದಿಗೆ ಡೇಟಾ ಸಂಗ್ರಹದಲ್ಲಿ ತೊಡಗಿದ್ದಾರೆ.

ಸಂಸ್ಥೆಯ ರಿಸರ್ಚ್ ಡೀನ್ ದೀಪ್ತ ಸತೀಶ್ ಅವರು ಪಶ್ಚಿಮ ಘಟ್ಟ ಹಾಗೂ ಅರೆಬಿಯನ್ ಸಮುದ್ರದ ನಡುವೆ ಕುಂದಾಪುರದ ಪಂಚ ಗಂಗಾವಳಿ ನದಿ ಪರಿಸರದಲ್ಲಿ ಅಭಿವೃದ್ಧಿಯಿಂದ ಪರಿಸರದ ಮೇಲಾಗುವ ಒತ್ತಡ, ಸಮಕಾಲೀನ ಪರಿಸರ ವೈರುಧ್ಯ, ಹವಾಮಾನ ಬದಲಾವಣೆಗಳ ಕುರಿತು ಸಂಶೋಧನೆ ನಡೆಸಲಿದ್ದಾರೆ. ಸಂಶೋಧನಾ ಕಾರ್ಯಕ್ಕೆ ಪ್ರತಿ ವರ್ಷ ತಲಾ 10 ಲಕ್ಷ ರೂ. ನಿಧಿಯನ್ನು ಕೊಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net