ಡಾ.ಸುಜಾತಾ ಮ್ಯಾಗಿನಮನಿಗೆ ಆದರ್ಶ ಶಿಕ್ಷಕಿ ಪ್ರಶಸ್ತಿ

Dr. Sujatha Maginamani Award for Ideal Teacher
ಧಾರವಾಡ ಕವಿವಿ ಕನಕ ಭವನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನುಡಿ ಸಡಗರ ಕಾರ್ಯಕ್ರಮದಲ್ಲಿ ಡಾ.ಸುಜಾತಾ ಮ್ಯಾಗಿನಮನಿ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕವಿವಿ ಕುಲ ಸಚಿವೆ ಪ್ರೊ.ಚಂದ್ರಮ್ಮ.ಎಂ., ಕುಲಸಚಿವ ಡಾ. ಹನುಮೇಗೌಡ .ಸಿ. ಸಂಯೋಜಕಿ ಡಾ. ಚಿಕ್ಕ ಹೆಜ್ಜಾಜಿ, ಶಶಿಕಲಾ ಹೆಬ್ಳಿಕರ ಇದ್ದರು.
Published on

ಬಾಗಲಕೋಟೆ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನಕ ಅಧ್ಯಯನ ಪೀಠ, ಚೇತನ ಫೌಂಡೇಷನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನುಡಿ ಸಡಗರ ಕಾರ್ಯಕ್ರಮದಲ್ಲಿ ಜಿಲ್ಲೆಯ ಬಾದಾಮಿ ತಾಲೂಕಿನ ಜಮ್ಮನಕಟ್ಟಿ ಗ್ರಾಮದ ಬಿ.ಬಿ.ಸಿ.ಸರ್ಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕಿ ಡಾ.ಸುಜಾತಾ ಮ್ಯಾಗಿನಮನಿ ಅವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಲಾಯಿತು.

ಧಾರವಾಡ ನಗರದ ಕನಕ ಭವನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರಕಲಾ ಕ್ಷೇತ್ರದಲ್ಲಿ ಗಣನೀಯ ಸಾಧನೆಯನ್ನು ಪರಿಗಣಿಸಿ ಪ್ರಸಕ್ತ ಸಾಲಿನ ಡಾ.ಎಸ್. ರಾಧಾಕೃಷ್ಣನ ರಾಷ್ಟ್ರೀಯ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕವಿವಿ ಕುಲ ಸಚಿವೆ ಪ್ರೊ.ಚಂದ್ರಮ್ಮ.ಎಂ., ಕುಲಸಚಿವ ಡಾ.ಹನುಮೇಗೌಡ ಸಿ., ಸಂಯೋಜಕಿ ಡಾ. ಚಿಕ್ಕ ಹೆಜ್ಜಾಜಿ, ಶಶಿಕಲಾ ಹೆಬ್ಳಿಕರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net