

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಮುಂಬರುವ ಲೋಕಸಭಾ ಚುನಾವಣೆಗೆ ಚಿಕ್ಕಬಳ್ಳಾಪುರ ೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆಯ ವಿಚಾರದಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಹೆಸರು ಮುಂಚೂಣಿಗೆ ಬಂದಿದೆ.
2024ರ ಲೋಕ ಸಮರಕ್ಕೆ ಪಕ್ಷದ ವರಿಷ್ಠರು ಟಿಕೆಟ್ ನೀಡುವುದಿಲ್ಲ, ಹಾಗೆಯೇ ಸ್ಪರ್ಧಿಸುವುದೂ ಇಲ್ಲ. ಚುನಾವಣಾ ನಿವೃತ್ತಿ ಹೊಂದುವುದಾಗಿ ಈಗಾಗಲೇ ಸಂಸದ ಬಿ.ಎನ್.ಬಚ್ಚೇಗೌಡ ಸ್ಪಷ್ಟಪಡಿಸಿದ್ದಾರೆ. ಇದರ ನಡುವೆ ಬಿಜೆಪಿಯಲ್ಲಿ ಹೊಸ ಆಕಾಂಗಳು ಮುಂಚೂಣಿಗೆ ಬಂದಿದ್ದಾರೆ. ಇದರಲ್ಲಿ ಪ್ರಸ್ತುತ ಡಾ.ಕೆ.ಸುಧಾಕರ್ ಹೆಸರು ಪ್ರಬಲವಾಗಿ ಚರ್ಚೆಯಾಗುತ್ತಿದ್ದು, ಈಗಾಗಲೇ ಆಂತರಿಕವಾಗಿ ಸ್ಪಷ್ಟ ರ್ನಿಣಯಕ್ಕೆ ಬರಲಾಗಿದೆ. ಇದರ ಲೆಕ್ಕಾಚಾರದಲ್ಲಿ ಪಕ್ಷ ಸಂಟಿಸಲಾಗುತ್ತದೆ. ಇನ್ನು ಹೈಕಮಾಂಡ್ ೂಷಣೆಯಂತೆ ನಡೆದುಕೊಳ್ಳಲಾಗುತ್ತದೆ ಎಂದು ಕಮಲ ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಪಕ್ಷ ಸಂಟನೆಯತ್ತ ಚಿತ್ತ
ಮೊದಲು ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಾಣುತ್ತಿದ್ದಂತೆ ಸುಧಾಕರ್ ಮತ್ತೆ ಮಾತೃಪಕ್ಷ ಕಾಂಗ್ರೆಸ್ಗೆ ಜಿಗಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದಕ್ಕೆ ಪುಷ್ಟಿ ನೀಡುವಂತೆ ಅಲ್ಲಲ್ಲಿ ಗೌಪ್ಯ ಸಭೆಗಳು ನಡೆದಿದ್ದವು. ಹಾಗೆಯೇ ರಾಜ್ಯಮಟ್ಟದ ಕಾಂಗ್ರೆಸ್ ನಾಯಕರು ಗ್ರೀನ್ ಸಿಗ್ನಲ್ ಕೊಡಲು ಮನಸ್ಸು ಹೊಂದಿದ್ದರು. ಇದೇ ವೇಳೆ ಸ್ಥಳಿಯ ಶಾಸಕರು ಮತ್ತು ಮುಖಂಡರ ಅಭಿಪ್ರಾಯದ ಮೇಲೆ ನಿರ್ಧಾರ ಕೈಗೊಳ್ಳುವ ಬೆಳವಣಿಗೆಯಲ್ಲಿ ತೊಡಕಾಯಿತು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದರ ನಡುವೆ ಸ್ವತ@ ಮಾಜಿ ಸಚಿವರೇ ಜನರಲ್ಲಿ ಮೂಡಿದ್ದ ಗೊಂದಲಕ್ಕೆ ತೆರೆ ಎಳೆದಿದ್ದು, ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ. ಪಕ್ಷ ಸಂಟಿಸಿ, ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಲಾಗುವುದು ಎಂದು ೂಷಿಸಿದ್ದರು. ಅದರಂತೆ ಪಕ್ಷದ ಚಟುವಟಿಕೆಯನ್ನು ಬಿರುಸುಗೊಳಿಸಿದ್ದಾರೆ. ಇತ್ತೀಚೆಗೆ ಚಿಕ್ಕಬಳ್ಳಾಪುರ ೇತ್ರದಲ್ಲಿ ಆಯ್ಕೆಯಾದ ಬಿಜೆಪಿ ಬೆಂಬಲಿತ ಗ್ರಾಪಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇದೀಗ ರೈತ ವಿರೋಧಿ ಧೋರಣೆಗಳನ್ನು ಖಂಡಿಸಿ, ಹೋರಾಟಕ್ಕೆ ಮುಂದಾಗಿದ್ದಾರೆ.
ಬೆಂಗಳೂರಿನಲ್ಲಿ ರಾಜಕೀಯ ಸಭೆ
ಬೆಂಗಳೂರಿನಲ್ಲಿ ಮಾಜಿ ಸಿಎಂ, ಬೆಂ.ಉತ್ತರ ಕ್ಷೇತ್ರದ ಸಂಸದ ಡಿ.ವಿ.ಸದಾನಂದಗೌಡ ಅವರ ನೇತೃತ್ವದಲ್ಲಿ ಇತ್ತೀಚೆಗೆ ಸಭೆ ನಡೆದಿದ್ದು, ಡಾ.ಕೆ.ಸುಧಾಕರ್ ಜತೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಿಜೆಪಿ ಅಭ್ಯರ್ಥಿಗಳಾದ ಸೀಕಲ್ ರಾಮಚಂದ್ರಗೌಡ, ವೇಣುಗೋಪಾಲ್, ಶಶಿಧರ್, ಮುನಿರಾಜು, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ರಾಮಲಿಂಗಪ್ಪ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು. ಸಭೆಯಲ್ಲಿ ಮುಂಬರುವ ಚಿಕ್ಕಬಳ್ಳಾಪುರ ಲೋಕಸಭೆ ಮತ್ತು ಆಗ್ನೇಯ ಶಿಕ್ಷಕರ ಚುನಾವಣೆಯ ವಿಚಾರವಾಗಿ ಮಹತ್ತರ ಚರ್ಚೆಗಳಾಗಿವೆ. ಈ ಎರಡೂ ಕಡೆ ಪಕ್ಷದವರು ಅಧಿಕಾರದಲ್ಲಿದ್ದು, ಹಾಗೆಯೇ ಮತ್ತೆ ಗೆಲುವು ಸಾಧಿಸಬೇಕಾಗಿದೆ. ಈ ನಿಟ್ಟಿನಲ್ಲಿ ಆಯಾ ವ್ಯಾಪ್ತಿಯಲ್ಲಿ ಪಕ್ಷ ಸಂಟನೆ ನಡೆಸಲು ಸೂಚಿಸಲಾಗಿದೆ.
ಸುಧಾಕರ್ ಹೆಸರು ಪ್ರಬಲ ಚರ್ಚೆ
ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ಡಾ.ಕೆ.ಸುಧಾಕರ್ ಲೋಕ ಸಮರಕ್ಕೆ ಅಭ್ಯರ್ಥಿಯನ್ನಾಗಿಸಲು ಪ್ರಸ್ತುತ ಒಲವು ವ್ಯಕ್ತವಾಗುತ್ತಿದೆ. ಇದಕ್ಕೆ ಬೆಂ.ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಣೆ, ಪಕ್ಷ ಸಂಟನೆಯಲ್ಲಿ ಸಹಭಾಗಿ ಸೇರಿದಂತೆ ನಾನಾ ಅಂಶಗಳ ಲೆಕ್ಕಾಚಾರ ಹಾಕಲಾಗುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಯವರೆಗೂ ಖಾಲಿಯಾಗಿದ್ದು ಅಧಿಕಾರಕ್ಕಾಗಿ ಕಾದು ನೋಡುವುದರ ಬದಲು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ಮತ್ತು ಆ ಮೂಲಕ ಸೋಲಿನ ಬಗ್ಗೆ ವ್ಯಂಗ್ಯಭರಿತವಾಗಿ ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಡುವುದು ಹಾಗೂ ಎದುರಾಳಿಗಳ ಕಡೆಗೆ ವಾಲಿ ಬೆಂಬಲಿಗರು ಚದುರುವುದನ್ನು ತಡೆಯುವ ಯೋಜನೆಯನ್ನು ಸುಧಾಕರ್ ರೂಪಿಸಿದ್ದಾರೆ. ಇದಕ್ಕಾಗಿ ಮೋದಿ ಅಲೆ, ವೈಯಕ್ತಿಕ ವರ್ಚಸ್ಸಿನಲ್ಲಿ ಲಾಭ ಹುಡುಕಲಾಗುತ್ತಿದೆ. ಇದರ ನಡುವೆ ಚುನಾವಣೆಗೆ ಬೆಂಗಳೂರಿನಲ್ಲಿನ ಶಾಸಕರು, ಮಾಜಿ ಶಾಸಕರು, ಪಕ್ಷದ ಹಿರಿಯ ನಾಯಕರು ಅವರವರ ಸಂಬಂಧಿಕರಿಗೆ ಪಕ್ಷದ ಟಿಕೆಟ್ ಕೊಡಿಸಲು ಕಸರತ್ತು ನಡೆಸುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರ ಅಧ್ಯಕ್ಷತೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಮುಖಂಡರನ್ನೊಳಗೊಂಡಂತೆ ನಡೆದ ಸಭೆಯಲ್ಲಿ ಪಾಲ್ಗೊಂಡು, ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧತೆ, ಜಿಲ್ಲೆಯಲ್ಲಿ ಪಕ್ಷ ಸಂಟನೆ ಸೇರಿದಂತೆ ಹಲವು ವಿಚಾರಗಳನ್ನು ಚರ್ಚಿಸಲಾಗಿದೆ.
ಡಾ ಕೆ.ಸುಧಾಕರ್, ಮಾಜಿ ಸಚಿವ, ಚಿಕ್ಕಬಳ್ಳಾಪುರ