ಮಹಿಳೆಯರು ಜವಾಬ್ದಾರಿ ಅರಿಯಲಿ

28 Jaggu 12
Published on

ಬೆಳಗಾವಿ: ಖಾನಾಪುರದ ಕುಸ್ಮಾಲಿಯಲ್ಲಿ ನವೀಕರಿಸಿದ ಮಹಾಲಕ್ಷ್ಮೀ ದೇವಾಲಯವನ್ನು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ಶುಕ್ರವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ರಾಷ್ಟ್ರ ನಿರ್ಮಾಣ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಮಹಿಳೆಯರ ಜವಾಬ್ದಾರಿ ಹೆಚ್ಚಿದೆ. ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು ಮತ್ತು ಜವಾಬ್ದಾರಿ ಅರಿಯಬೇಕು ಎಂದರು. ಸಮಾಜವು ಎಲ್ಲ ಅಂಶಗಳಲ್ಲಿ ಪರಿವರ್ತನೆ ಮತ್ತು ಪುನರುಜ್ಜೀವನಕ್ಕೆ ಒಳಗಾಗುತ್ತಿದೆ. ತಪ್ಪು ವಿಷಯಗಳನ್ನು ಬಿಟ್ಟು ಸರಿಯಾದ ಮಾರ್ಗದಲ್ಲಿ ನಡೆದರೆ ಸಾಧನೆ ಸಾಧ್ಯ ಎಂದರು.

ಶಾಸಕ ಅಭಯ್ ಪಾಟೀಲ ಮಾತನಾಡಿ, ಕನಸು ಕಾಣುವುದು ಪ್ರತಿಯೊಬ್ಬರ ಹಕ್ಕು ಮತ್ತು ಅದನ್ನು ಸಾಕಾರಗೊಳಿಸುವುದಕ್ಕೆ ಶ್ರಮಿಸಬೇಕು ಎಂದು ಹೇಳಿದರು. ಪಂಡಿತ ಒಗಲೆ, ಗ್ರಾಪಂ ಅಧ್ಯಕ್ಷ ಆರೋಹಿ ಪಾಟೀಲ, ಮೇಘಾ ಕದಮ್, ಅನಂತ ಸಾವಂತ ವೇದಿಕೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net