ದೇಶದ ಉಳಿವಿಗಾಗಿ ಮನೆಯಲ್ಲೇ ಇರೋಣ- ಡಾ.ಶಿವಾನಂದ ಭಾರತಿ ಶ್ರೀ

01
Published on

ಬೈಲಹೊಂಗಲ: ವಿಶ್ವಕ್ಕೆ ವ್ಯಾಪಿಸಿರುವ ಮಹಾಮಾರಿ ಕರೊನಾ ಸೋಂಕಿನಿಂದ ನಮ್ಮನ್ನು ನಾವು ರಕ್ಷಿಸಿಕೊಂಡಿದ್ದಾದರೆ ಇತರರನ್ನು ರಕ್ಷಿಸಲು ಸಾಧ್ಯ. ನಾವು ಜಾಗೃತಿ ವಹಿಸದಿದ್ದರೆ ನಮಗೆ ಮತ್ತು ನಮ್ಮ ಪರಿವಾರಕ್ಕೆ ನಾವೇ ಶತ್ರುಗಳಾಗುತ್ತೇವೆ ಎಂದು ಸುಕ್ಷೇತ್ರ ಇಂಚಲದ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಹೇಳಿದ್ದಾರೆ.

ಕರೊನಾ ಸೋಂಕು ಭಾರತ ದೇಶಕ್ಕೆ ಅಂಟಿಕೊಂಡಿದ್ದು, ದುಃಖಕರ ಸಂಗತಿ. ಕರೊನಾಒಬ್ಬರಿಂದ ಒಬ್ಬರಿಗೆ ಹರಡುವ ಮಾರಣಾಂತಿಕ ವೈರಸ್ ಆಗಿದ್ದು, ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಪಾಡಬೇಕು. ಹಿರಿಯ ನಾಗರಿಕರನ್ನು ಗೌರವದಿಂದ ಕಾಣಬೇಕು. ಅವರ ಆರೋಗ್ಯದ ಗಮನ ಹರಿಸಬೇಕು. ಸರ್ಕಾರದ ಎಲ್ಲ ಸೂಚನೆಗಳನ್ನು ಚಾಚೂತಪ್ಪದೆ ಪಾಲಿಸಬೇಕು. ಸೋಂಕಿನ ಲಕ್ಷಣ ಕಂಡು ಬಂದಲ್ಲಿ ತಕ್ಷಣ ಆರೋಗ್ಯ ಕೇಂದ್ರ ಸಂಪರ್ಕಿಸಬೇಕು ಎಂದು ಶ್ರೀಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ದೇಶದ ಸುರಕ್ಷತೆಯಿಂದ ಪ್ರಧಾನಿ ಮೋದಿ ಅವರು 21 ದಿನಗಳ ಲಾಕ್ ಡೌನ್ ಘೋಷಿಸಿದ್ದು, ಮನೆಯಲ್ಲಿ ಇರುವ ಮೂಲಕ ದೇಶ ರಕ್ಷಣೆಗೆ ಕೊಡುಗೆ ನೀಡೋಣ. ಕರೊನಾ ಸೋಂಕು ಪೀಡಿತರಿಗಾಗಿ ಎದೆಗೊಟ್ಟು ಹಗಲಿರುಳು ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ, ನರ್ಸ್‌ಗಳಿಗೆ, ಅಧಿಕಾರಿಗಳಿಗೆ, ಪೌರ ಕಾರ್ಮಿಕರಿಗೆ, ಪೊಲೀಸರಿಗೆ, ಮಾಧ್ಯಮದವರಿಗೆ ಧನ್ಯವಾದ ಸಲ್ಲಿಸೋಣ ಎಂದು ಶ್ರೀಗಳು ಕೋರಿದ್ದಾರೆ.
30ಬಿಎಲ್‌ಎಚ್6: ಡಾ.ಶಿವಾನಂದ ಭಾರತಿ ಶ್ರೀ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net