ವಿದೇಶಿ ವಿನಿಮಯದಲ್ಲಿ ಡಾ. ಸಿಂಗ್ ಸಾಧನೆ ಅಭೂತಪೂರ್ವ

 ಯಾಚೇನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ಹಾಗೂ ಎಚ್.ಎಸ್ ಮಹದೇವ್ ಪ್ರಸಾದ್‌ರ ಪುಣ್ಯಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ವೈ.ಎನ್.ಶಂಕರೇಗೌಡ, ವೈ.ಕೆ.ಕ್ಯಾತೇಗೌಡ, ಗಣೇಶ್, ಸತ್ಯನಾರಾಯಣಗೌಡ ಇದ್ದರು.
ಯಾಚೇನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ಹಾಗೂ ಎಚ್.ಎಸ್ ಮಹದೇವ್ ಪ್ರಸಾದ್‌ರ ಪುಣ್ಯಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ವೈ.ಎನ್.ಶಂಕರೇಗೌಡ, ವೈ.ಕೆ.ಕ್ಯಾತೇಗೌಡ, ಗಣೇಶ್, ಸತ್ಯನಾರಾಯಣಗೌಡ ಇದ್ದರು.
Published on

ಬನ್ನೂರು: ಪ್ರಸ್ತುತ ಪ್ರತಿಯೊಂದಕ್ಕೂ ಆಧಾರ್ ಕಾರ್ಡ್ ಬಳಕೆ ಕಡ್ಡಾಯವಾಗಿದ್ದು, ಒಂದೇ ಕಾರ್ಡ್‌ನಲ್ಲಿ ಸಮಗ್ರ ಮಾಹಿತಿ ತರಬೇಕೆನ್ನುವ ದೂರದೃಷ್ಟಿಯನ್ನು ಮಾಜಿ ಪ್ರಧಾನಿ ದಿ.ಮನಮೋಹನ್‌ಸಿಂಗ್ ಹೊಂದಿದ್ದರು ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್. ಶಂಕರೇಗೌಡ ತಿಳಿಸಿದರು.

ಪಟ್ಟಣದ ಸಮೀಪದ ಯಾಚೇನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ಹಾಗೂ ಎಚ್.ಎಸ್. ಮಹದೇವ್ ಪ್ರಸಾದ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದೇಶಿ ವಿನಿಮಯ ಕನಿಷ್ಟ ಹಂತದಲ್ಲಿದ್ದ ಸಂದರ್ಭದಲ್ಲಿ ಅಧಿಕಾರ ವಹಿಸಿಕೊಂಡ ಮನಮೋಹನ್ ಸಿಂಗ್ ವಿದೇಶಿ ವಿನಿಮಯದಲ್ಲಿ ಅಭೂತಪೂರ್ವ ಸಾಧನೆ ಮಾಡಿ ತೋರಿಸಿದರೆಂದು ಶ್ಲಾಘಿಸಿದರು.

ಗ್ರಾಮದ ಅಭಿವೃದ್ಧಿಗೆ ಮಹದೇವ ಪ್ರಸಾದ್ ಅಪಾರ ಕೊಡುಗೆ ನೀಡಿದ್ದಾರೆ. ದೇಶ ಹಾಗೂ ರಾಜ್ಯ ಉತ್ತಮ ರಾಜಕಾರಣಿಯನ್ನು ಕಳೆದುಕೊಂಡಿದೆ ಎಂದರು.

ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ನಿಧನಕ್ಕೆ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಜೈನಹಳ್ಳಿ ಸತ್ಯನಾರಾಯಣಗೌಡ, ವೈ.ಎಚ್.ಹನಮಂತೇಗೌಡ, ಬೋರೇಗೌಡ, ಮಹೇಂದ್ರ, ಮಲ್ಲೇಶ್, ಉಮೇಶ್, ಶಿವಕುಮಾರ್, ದುರ್ಗೇಶ್, ವೈ.ಎಂ. ಪುಟ್ಟರಾಜು, ವೈ.ಕೆ.ಕ್ಯಾತೇಗೌಡ, ವೈ.ಎಸ್. ಶೇಖರ್, ಡಿಎಸ್‌ಎಸ್ ಸೋಮಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net