

ನವಲಗುಂದ: ಡಾ. ಮನಮೋಹನ್ ಸಿಂಗ್ ಅವರು ದೇಶದ ಆರ್ಥಿಕ ಸುಧಾರಣೆಗೆ ದಿಟ್ಟ ಹೆಜ್ಜೆ ಕೈಗೊಂಡು, ಆಧುನಿಕ ಭಾರತದ ಆರ್ಥಿಕತೆಯ ರೂವಾರಿ ಎನಿಸಿಕೊಂಡಿದ್ದರು ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ: ಸಿಂಗ್ ಅವರು 1991ರಲ್ಲಿ ಮೊದಲ ಬಾರಿಗೆ ರಾಜ್ಯಸಭೆ ಪ್ರವೇಶಿಸಿದರು. ಹಣಕಾಸು ಸಚಿವರಾಗಿ ದೇಶದ ಆರ್ಥಿಕ ಸುಧಾರಣೆಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದರು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡರ, ಸದುಗೌಡ ಪಾಟೀಲ, ಆರ್.ಎಚ್. ಕೋನರಡ್ಡಿ, ನಂದಿನಿ ಹಾದಿಮನಿ, ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ಜೀವನ ಪವಾರ, ಮೋದಿನ ಶಿರೂರ, ಸುರೇಶ ಮೇಟಿ, ಹುಸೇನಬಿ ಧಾರವಾಡ, ಉಸ್ಮಾನ ಬಬರ್ಚಿ, ಡಿ.ಕೆ. ಹಳ್ಳದ, ಮಾಂತೇಶ ಹಂಚಿನಾಳ, ಎಂ.ಬಿ. ತೋಟಿ, ಅಶ್ಫಾಕ ಚಾಹುಸೇನ, ಸಂತೋಷಗೌಡ ಪಾಟೀಲ, ಭೀಮರಡ್ಡಿ ಮುಳ್ಳೂರ, ಮದರಸಾಬ ಉಗರಗೋಳ, ಕಿರಣ ಉಳ್ಳಿಗೇರಿ, ಏಕನಾಥ ಜಾಧವ, ಶಿವಾನಂದ ಅವಡಿ, ಮುತ್ತು ಕಾಲವಾಡ, ಪ್ರಭುಪಾಟೀಲ, ಶಾಂತಾ ಚಿಕ್ಕನರಗುಂದ, ಶೈಲಾ ನರಗುಂದ ಇತರರು ಇದ್ದರು.