

ಮಂಡ್ಯ: ಮುಂದಿನ ಪೀಳಿಗೆ ಉಳಿವು ಮತ್ತು ಜಾಗತಿಕ ತಾಪಮಾನ ಕಡಿಮೆ ಮಾಡಲು ಗಿಡ ನೆಟ್ಟು ಪೋಷಣೆ ಮಾಡಬೇಕು ಎಂದು ಬಿಜೆಪಿ ನಗರಾಧ್ಯಕ್ಷ ವಸಂತಕುಮಾರ್ ಹೇಳಿದರು.
ಬಿಜೆಪಿ ಸಂಸ್ಥಾಪಕ ದಿ.ಡಾ.ಶ್ಯಾಮಾ ಪ್ರಸಾದ್ ಮುಖರ್ಜಿ ಸ್ಮರಣಾರ್ಥ ನಗರದ ಹೊಸಹಳ್ಳಿಯ ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆ ಆವರಣದಲ್ಲಿ ಗಿಡ ನೆಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶ್ಯಾಮಾ ಪ್ರಸಾದ್ ಮುಖರ್ಜಿ ಅವರ ಸ್ಮರಣಾರ್ಥ ದೇಶದಲ್ಲೆಡೆ ಸಾರ್ವಜನಿಕ ಸ್ಥಳ, ದೇವಾಲಯದ ಆವರಣ, ಉದ್ಯಾನದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದಶಿ ವಿವೇಕ್ ಮಾತನಾಡಿ, ವಾಸ್ತವವಾಗಿ ಪರಿಸರದ ಅಡೆತಡೆ ಅಥವಾ ಅಸಮತೋಲನಗಳು, ಬರ, ಪ್ರವಾಹ ಮತ್ತು ಹಲವಾರು ಇತರ ವಿಪತ್ತುಗಳು ಮತ್ತು ನೈಸರ್ಗಿಕ ವಿಕೋಪಗಳಿಗೆ ಕಾರಣವಾಗಬಹುದು. ಈ ಹಿನ್ನೆಲೆಯಲ್ಲಿ ಮರಗಳನ್ನು ಉಳಿಸುವುದು ಮತ್ತು ಅವುಗಳನ್ನು ಸಂರಕ್ಷಿಸಬೇಕು ಎಂದರು.
ಮಾಧ್ಯಮ ವಕ್ತಾರ ಸಿ.ಟಿ.ಮಂಜುನಾಥ್, ಹೊಸಹಳ್ಳಿ ಶಿವು, ಶಿವಕುಮಾರ್ ಕೆಂಪಯ್ಯ, ಪ್ರಸನ್ನ, ಬೋರಪ್ಪ, ಕೃಷ್ಣ, ಮಹಂತಪ್ಪ, ಆನಂದ್ ಮತ್ತಿತರರಿದ್ದರು.