ಡಾ.ಶೋಭಾ ಪ್ರಕಾಶ್​ ಫನಾದ ಪ್ರಥಮ ಮಹಿಳಾ ಅಧ್ಯಕ್ಷೆ

PHANA
Published on

ಬೆಂಗಳೂರು: ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್​ ಹೋಮ್ಸ್​ ಅಸೋಸಿಯೇಷನ್​(ಫನಾ)ನ ಪ್ರಥಮ ಮಹಿಳಾ ಅಧ್ಯಕ್ಷೆರಾಗಿ ಡಾ.ಶೋಭಾ ಪ್ರಕಾಶ್​ ಭಾನುವಾರ ಅಧಿಕಾರ ಸ್ವೀಕರಿಸಿದರು.ಇವರ ಅಧಿಕಾರವಾಧಿ 2025ರಿಂದ 2027ರವರೆಗೆ ಇರಲಿದೆ. ನಗರದಲ್ಲಿ ನಡೆದ ರಾಷ್ಟ್ರೀಯ ಆರೋಗ್ಯ ಶೃಂಗಸಭೆಯಲ್ಲಿ ಅಧ್ಯಕ್ಷರನ್ನಾಗಿ ಘೋಷಿಸಲಾಯಿತು.

ಡಾ.ಶೋಭಾಪ್ರಕಾಶ್​ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಸುರಕ್ಷತೆ, ಶಿಷ್ಟತೆ ಮತ್ತು ಹೊಸ ತಂತ್ರಾಂಶ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಗುಣಮಟ್ಟ ಕಾಪಾಡಲು ಬದ್ಧಳಾಗಿದ್ದೇನೆ. ಆರೋಗ್ಯ ವ್ಯವಸ್ಥೆ ಬುನಾದಿ ಬಲಪಡಿಸುವ ಬಗ್ಗೆ ಹಿರಿಯರ ವೈದ್ಯರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದರು.

ಸಚಿವ ದಿನೇಶ್​ ಗುಂಡೂರಾವ್​ ಮಾತನಾಡಿ, ಎಲ್ಲರಿಗೂ ಸಮಾನ, ಗುಣಮಟ್ಟ ಆರೋಗ್ಯ ರಕ್ಷಣೆ ಆಸ್ಪತ್ರೆಗಳಲ್ಲಿ ಹೊಸ ನಾವೀನ್ಯತೆ ಅಳವಡಿಸಿಕೊಳ್ಳಬೇಕು. ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಇನ್ನಷ್ಟು ಬಲಗೊಳ್ಳಬೇಕು. ಪ್ರತಿ ಹಂತದಲ್ಲೂ ರೋಗಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕು. ರಾಷ್ಟ್ರೀಯ ಆರೋಗ್ಯ ಶೃಂಗಸಭೆಯಲ್ಲಿ ತೆಗೆದುಕೊಂಡಿರುವ ವಿಚಾರಗಳು ನಿರ್ಣಾಯಕವಾಗಿವೆ. ನಮ್ಮ ಸರ್ಕಾರ ಉತ್ತಮ ಆರೋಗ್ಯ ವ್ಯವಸ್ಥೆ ರೂಪಿಸುತ್ತಿದೆ ಎಂದರು. ಸಚಿವ ಡಾ.ಶರಣ ಪ್ರಕಾಶ್​ ಪಾಟೀಲ್​ ಮಹಿಳಾ ಸುರಕ್ಷತೆ ಬಗ್ಗೆ ಮಾತನಾಡಿದರು. ನಿರ್ಗಮಿತ ಅಧ್ಯಕ್ಷ ಡಾ.ಗೋವಿಂದಯ್ಯ ಯತೀಶ್​, ನಾರಾಯಣ ಹೆಲ್ತ್​ ಅಧ್ಯಕ್ಷ ಡಾ.ದೇವಿಶೆಟ್ಟಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net