

ಮಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಕೋಟ ಶಿವರಾಮ ಕಾರಂತರ ಹುಟ್ಟು ಹಬ್ಬದ ಸಲುವಾಗಿ ಕಲ್ಕೂರ ಪ್ರತಿಷ್ಠಾನವು ಆಯೋಜಿಸಿದ್ದ ‘ಅಂಚೆ ಕಾರ್ಡಿನಲ್ಲಿ ಕಾರಂತ’ ಚಿತ್ರ ರಚನಾ ಸ್ಪರ್ಧೆಯ ಫಲಿತಾಂಶ ಪ್ರಕಟಿಸಲಾಗಿದೆ.
ಮುಕ್ತ ವಿಭಾಗದಲ್ಲಿ ಮಯೂರ ಮಂಗೇಶ ಅಗೇರ ಅಂಕೋಲಾ ಪ್ರಥಮ, ದಿಶಾನ್ ಎಲ್.ಕುಲಾಲ್ ಕುಂಪಲ ದ್ವಿತೀಯ ಹಾಗೂ ಬಿಂದು ಕೆ.ಚಿಲಿಂಬಿ ಮಂಗಳೂರು ತೃತೀಯ ಸ್ಥಾನ ಪಡೆದಿದ್ದಾರೆ. ಹೈಸ್ಕೂಲ್ ವರೆಗಿನ ವಿಭಾಗದಲ್ಲಿ ಶ್ರೀಯಾ ಎಸ್.ಆಚಾರ್, ಕುಂದಾಪುರ, ಪ್ರಾಂಜಲಿ ನಾವಡ ಪಡೀಲ್ ಮಂಗಳೂರು ಹಾಗೂ ಧೃತಿ ವಿನಯ್ ಮೂಡುಬಿದಿರೆ ತೃತೀಯ ಸ್ಥಾನ ಪಡೆದಿದ್ದಾರೆ.
ವಿಜೇತರಿಗೆ ಅ.10 ರಂದು, ಬೆಳಗ್ಗೆ 10 ಗಂಟೆಗೆ ಮಂಗಳೂರಿನ ಕೊಡಿಯಾಲ್ ಗುತ್ತು ರಸ್ತೆಯಲ್ಲಿರುವ ಹೋಟೆಲ್ ಜನತಾ ಡಿಲಕ್ಸ್ ನ ಪತ್ತುಮುಡಿ ಸೌಧದಲ್ಲಿ ಜರುಗಲಿರುವ ಕಾರಂತ ಹುಟ್ಟು ಹಬ್ಬ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದೆಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.