ಡಾ.ಶಿವಣಗಿ ಕಾರ್ಯ ಸಮಾಜಕ್ಕೆ ಮಾದರಿ

13Athni3
Published on

ಅಥಣಿ: ದೇಶದ ಮಹಾನ್ ದಾನಿಗಳಾದ ರತನ್ ಟಾಟಾ, ಸುಧಾ ನಾರಾಯಣ ಮೂರ್ತಿ, ಅಜೀಂ ಪ್ರೇಮಜಿ ಅವರ ಸಾಲಿನಲ್ಲಿ ಡಾ.ಸಂಪತಕುಮಾರ ಶಿವಣಗಿ ಅವರು ನಿಲ್ಲುತ್ತಾರೆ ಎಂದು ಹಿರಿಯ ವೈದ್ಯ ಡಾ.ಬಿ.ಡಿ.ಹುಂಡೆಕಾರ ಹೇಳಿದರು.

ಪಟ್ಟಣದ ಶಿವಣಗಿ ಸಂಸ್ಕೃತಿ ಭವನದಲ್ಲಿ ಶಿವಶಿಂಪಿ ಸಮುದಾಯದಿಂದ ಭಾನುವಾರ ಹಮ್ಮಿಕೊಂಡಿದ್ದ ಡಾ.ಸಂಪತಕುಮಾರ ಶಿವಣಗಿ ಅವರ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೋರಾಟ, ಸಂಘಟನೆಗಳ ಮೂಲಕ ವ್ಯಕ್ತಿತ್ವ ರೂಪಿಸಿಕೊಂಡು ವಿದೇಶದಲ್ಲಿದ್ದರೂ ಸಹ ತಾಯ್ನಡಿನ ಪ್ರೀತಿ, ವಿಶ್ವಾಸ ಉಳಿಸಿಕೊಂಡು ತಮ್ಮ ಆದಾಯದಲ್ಲಿ ಆರೋಗ್ಯ ಸೇವೆ ಮತ್ತು ಶಿಕ್ಷಣಕ್ಕಾಗಿ ದೇಣಿಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ ಎಂದರು.

ಡಾ.ಸಂಪತಕುಮಾರ ಶಿವಣಗಿ ಮಾತನಾಡಿ, ನಾನು ಉನ್ನತ ಸ್ಥಾನಕ್ಕೇರಲು ಮುರುಘೇಂದ್ರ ಶಿವಯೋಗಿಗಳ ಆಶೀರ್ವಾದ ಕಾರಣ. ಸಾಧಕರಿಗೆ ಪ್ರೇರಕ ಶಕ್ತಿಯಾಗಿದ್ದು, ದಾನ, ಧರ್ಮದ ಗುಣ ಈ ಮಣ್ಣಿನಲ್ಲಿದೆ. ಹುಟ್ಟೂರಿಗೆ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ವಿನಿಯೋಗಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಶಂಭುಲಿಂಗ ಮಮದಾಪುರ ಮಾತನಾಡಿದರು. ಶಿವಣಗಿ ದಂಪತಿಯನ್ನು ಸನ್ಮಾನಿಸಲಾಯಿತು. ಶಿವಶಿಂಪಿ ಸಮುದಾಯದ ಅಧ್ಯಕ್ಷ ಬಸವರಾಜ ಬನಹಟ್ಟಿ, ಡಾ.ಉದಯಾ ಶಿವಣಗಿ, ಸುನೀಲ ಶಿವಣಗಿ, ರಮೇಶ ಸಿಂದಗಿ, ಚಂದ್ರಶೇಖರ ಯಲ್ಲಟ್ಟಿ, ವಿಜಯ ಉಮರಾಣಿ, ಈರಣ್ಣ ಮಮದಾಪೂರ, ವಂದನಾ ಶಿವಣಗಿ, ವಾಣಿಶ್ರೀ ಯಲ್ಲಟ್ಟಿ, ಮಂಜುಳಾ ಚೊಳ್ಳಿ, ಚನ್ನಪ್ಪ ಯಲಟ್ಟಿ, ಜ್ಯೋತಿ ಕಲ್ಯಾಣಶೆಟ್ಟಿ, ಶಿಲ್ಪಾ ಯಲಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net