ಡಾ.ಶಿವಕುಮಾರ ಶ್ರೀಗಳ ಕಾರ್ಯ ವಿಶ್ವಕ್ಕೆ ಮಾದರಿ

ಕೆ.ಆರ್.ನಗರದ ಗರುಡಗಂಭ ವೃತ್ತದಲ್ಲಿ ಶ್ರೀ ಡಾ.ಶಿವಕುಮಾರ ಶ್ರೀಗಳ ಜನ್ಮ ದಿನವನ್ನು ಆಚರಿಸಲಾಯಿತು. ಕೆ.ಎಸ್.ಮಹೇಶ್, ಎಲ್.ಪಿ.ರವಿಕುಮಾರ್,ರಾಜಶೇಖರ್ ಇದ್ದರು.
ಕೆ.ಆರ್.ನಗರದ ಗರುಡಗಂಭ ವೃತ್ತದಲ್ಲಿ ಶ್ರೀ ಡಾ.ಶಿವಕುಮಾರ ಶ್ರೀಗಳ ಜನ್ಮ ದಿನವನ್ನು ಆಚರಿಸಲಾಯಿತು. ಕೆ.ಎಸ್.ಮಹೇಶ್, ಎಲ್.ಪಿ.ರವಿಕುಮಾರ್,ರಾಜಶೇಖರ್ ಇದ್ದರು.
Published on

ಕೆ.ಆರ್.ನಗರ: ಪಟ್ಟಣದ ಗರುಡಗಂಭ ವೃತ್ತದಲ್ಲಿ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಶ್ರೀಗಳ ಜನ್ಮ ಜಯಂತಿಯನ್ನು ತಾಲೂಕು ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಆಚರಿಸಲಾಯಿತು.

ಸಂಘದ ಅಧ್ಯಕ್ಷ ರಾಜಶೇಖರ್ ಮಾತನಾಡಿ, ಶಿವಕುಮಾರ ಶ್ರೀಗಳು ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ, ಅನ್ನ, ಆಶ್ರಯ ನೀಡುವ ಮೂಲಕ ಬಾಳಿಗೆ ಬೆಳಕಾಗಿದ್ದಾರೆ. ಕಠಿಣ ಪರಿಸ್ಥಿತಿಯಲ್ಲಿಯೂ ವಿದ್ಯಾರ್ಥಿಗಳಿಗೆ ದಾಸೋಹ ನೀಡುವ ಮೂಲಕ ವಿಶ್ವಕ್ಕೆ ಮಾದರಿಯಾಗಿದ್ದಾರೆ. ಅಭಿನವ ಬಸವಣ್ಣ ಎಂಬ ಬಿರುದಾಂಕಿತರಾಗಿದ್ದ ಪರಮಪೂಜ್ಯರು ಬಸವಣ್ಣನವರ ಕಾಯಕ ತತ್ವವನ್ನು ನಾಡಿನಾದ್ಯಂತ ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಸ್ಮರಿಸಿದರು.

ಮಠಕ್ಕೆ ಬರುವ ಸಾವಿರಾರು ಭಕ್ತರಿಗೆ ನಿತ್ಯ ದಾಸೋಹ ನೀಡುವುದರ ಜತೆಗೆ ಇಷ್ಟಲಿಂಗ ಪೂಜೆ, ವಚನದ ತತ್ವಗಳನ್ನು ತಿಳಿಸಿಕೊಟ್ಟರು. ಇಂತಹ ಮಹಾನ್ ಸಂತನನ್ನು ನಾವೆಲ್ಲರೂ ನಿತ್ಯ ಭಕ್ತಿಯಿಂದ ಪೂಜಿಸಿ ನೆನೆಯಬೇಕು ಎಂದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ವೀರಶೈವ ಲಿಂಗಾಯತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಲ್.ಪಿ.ರವಿಕುಮಾರ್, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಉಪಾಧ್ಯಕ್ಷ ಭೇರ್ಯ ಪ್ರಕಾಶ್, ಅರುಣ್ ಬಿ. ನರಗುಂದ, ವಕೀಲರಾದ ಮಹೇಶ್, ವೀರಶೈವ-ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷ ಜಗದೀಶ್, ಮುಖಂಡರಾದ ಕರ್ಪೂರಳ್ಳಿ ಮಹದೇವ್, ಸದಾನಂದ, ವಸಂತ ಕುಮಾರ್, ಜ್ಞಾನಾನಂದ, ಪುಟ್ಟರಾಮು, ಸಂಘದ ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ಗಂಗಾಧರ್, ಪದಾಧಿಕಾರಿಗಳಾದ ಅಣ್ಣಜಪ್ಪ, ಹೇಮೇಶ್, ಹರೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net