ಡಾ.ಶಿವಕುಮಾರ ಸ್ವಾಮೀಜಿ ಜಯಂತಿ

ಮಳವಳ್ಳಿ ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಮುಂಭಾಗ ಸೋಮವಾರ ವಿವಿಧ ಸಂಘಟನೆಗಳ ಸಹಯೋಗದಲ್ಲಿ ತ್ರಿವಿಧ ದಾಸೋಹಿ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಶ್ರೀಗಳ 117 ನೇ ಜಯಂತಿ ಆಚರಿಸಲಾಯಿತು. ಕುಂದೂರು ಮೂರ್ತಿ, ತೊಟ್ಟಿಮನೆ ಚನ್ನಪ್ಪ, ಅಶೋಕ್ ಕ್ಯಾತನಹಳ್ಳಿ, ಜಗದೀಶ್, ಎಚ್.ಸಿ.ಮಹೇಶ, ಸುಬ್ರಮಣ್ಯಸ್ವಾಮಿ ಇದ್ದರು.

Published on

ಮಳವಳ್ಳಿ: ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಸೋಮವಾರ ತ್ರಿವಿಧ ದಾಸೋಹಿ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರ 117ನೇ ಜಯಂತಿ ಅಂಗವಾಗಿ ಅನ್ನಸಂತರ್ಪಣೆ ಹಾಗೂ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಕೈಂಕರ್ಯಗಳು ಭಕ್ತಭಾವದೊಂದಿಗೆ ನಡೆದವು.

ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಮುಂಭಾಗ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಡೆದಾಡುವ ದೇವರೆಂದೇ ಕರೆಸಿಕೊಂಡಿರುವ ಡಾ.ಶಿವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.ಇದೇ ವೇಳೆ ಅನ್ನಸಂತರ್ಪಣೆ ನಡೆಯಿತು. ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಕುಂದೂರು ಮೂರ್ತಿ, ಪ್ರಧಾನ ಕಾರ್ಯದರ್ಶಿ ದಯಾಶಂಕರ್, ಬಸವಕೇಂದ್ರ ಜಿಲ್ಲಾಧ್ಯಕ್ಷ ನಾಗರಾಜು, ತಾಲೂಕು ಅಧ್ಯಕ್ಷ ತೊಟ್ಟಿಮನೆ ಚನ್ನಪ್ಪ, ಪಟ್ಟಣ ಬಸವ ಕೇಂದ್ರದ ಅಧ್ಯಕ್ಷ ಮಲ್ಲೇಶ್, ನಿರ್ದೇಶಕರಾದ ಮಹದೇವಸ್ವಾಮಿ, ಬಸವರಾಜಪ್ಪ, ಪ್ರಕಾಶ್, ಪೋಸ್ಟ್ ಮಲ್ಲೇಶ್, ವೀರಶೈವ ಯುವ ಬಳಗದ ಅಧ್ಯಕ್ಷ ಎಚ್.ಸಿ.ಮಹೇಶ, ಪ್ರಧಾನ ಕಾರ್ಯದರ್ಶಿ ಸುಬ್ರಮಣ್ಯ, ಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಅಶೋಕ್ ಕುಮಾರ್, ಮುಖಂಡರಾದ ಎಚ್.ಬಿ.ಶಿವಸ್ವಾಮಿ, ಜಗದೀಶ್, ತೆಂಕಹಳ್ಳಿ ಮಹೇಶ್, ಪ್ರಸಾದ್, ನಾಗರಾಜು ಸೇರಿದಂತೆ ಇತರರಿದ್ದರು.

ವಿವಿಧೆಡೆ ಅನ್ನಸಂತರ್ಪಣೆ: ಎನ್‌ಇಎಸ್ ಬಡಾವಣೆ, ಬಸವೇಶ್ವರ ವೃತ್ತ, ಅನಂತ್ ರಾಮ್ ವೃತ್ತ, ತಾಲೂಕಿನ ರಾಗಿಬೊಮ್ಮನಹಳ್ಳಿ, ಕನ್ನಳ್ಳಿ, ನಾರಾಯಣಪುರ, ಡಿ.ಹಲಸಹಳ್ಳಿ, ಬೆಳಕವಾಡಿ, ಪೂರಿಗಾಲಿ, ಬಿ.ಜಿ.ಪುರ, ನೆಲ್ಲಿಗೆರೆ, ಹಂಗ್ರಾಪುರ, ವೀರಾಜಿಪುರ, ಚಿಕ್ಕಮುಲಗೂಡು, ದುಗ್ಗನಹಳ್ಳಿ, ಕಿರುಗಾವಲು, ಹಲಗೂರು, ಗ್ರಾಮದೇವತೆ ಪುರ ಸೇರಿದಂತೆ ಬಹುತೇಕ ಗ್ರಾಮದಲ್ಲಿ ಶ್ರೀಗಳ ಭಾವಚಿತ್ರ ಮೆರವಣಿಗೆ, ಅನ್ನಸಂರ್ತಣೆ ಕಾರ್ಯಕ್ರಮಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net