

ಕಲಬುರಗಿ :ಕಲಬುರಗಿ ನಗರ ಪೊಲೀಸ್ ಆಯುಕ್ತರಾಗಿ ಡಾ.ಶರಣಪ್ಪ ಎಸ್.ಡಿ ಅವರನ್ನು ನೇಮಕಗೊಳಿಸಿ ಸರ್ಕಾರ ಇಂದು ಅದೇಶ ಹೊರಡಿಸಿದೆ.
ಇದರಿಂದ ಕಳೆದೊಂದು ತಿಂಗಳಿಂದ ಖಾಲಿ ಇದ್ದ ಹುದ್ದೆಗೆ ಖಡಕ್ ಅಧಿಕಾರಿ ನಿಯೋಜನೆಗೊಂಡಂತಾಗಿದೆ. ರೈಲ್ವೆ ಡಿಐಜಿ ಆಗಿದ್ದರು. ಮೂಲತ: ಕಲಬುರಗಿ ಜಿಲ್ಲೆಯ ಖಜೂರಿ ಗ್ರಾಮದವರು. ಇದೇ ಮೊದಲ ಅವರು ತವರು ಜಿಲ್ಲೆಯಲ್ಲಿ ಸೇವೆಗೆ ನಿಯೋಜನೆಗೊಂಡಿದ್ದಾರೆ. ಅಲ್ಲದೆ ಜಿಲ್ಲೆಯವರೇ ಕಲಬುರಗಿ ನಗರ ಪೊಲೀಸ್ ಆಯುಕ್ತರಾದ ಮೊದಲಿಗರು ಎಂಬ ಹೆಗ್ಗಳಿಕೆ ಅವರದಾಗಿದೆ.