

ಯಾದಗಿರಿ: ರಾಜಕೀಯದಲ್ಲಿ ಯಾವಾಗ ಏನು ಬೇಕಾದರೂ ಬದಲಾವಣೆ ಆಗಬಹುದು. ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದ ಕಾರ್ಯಕರ್ತರಿಗೆ ಖಂಡಿತವಾಗಿಯೂ ಒಂದು ದಿನ ಉತ್ತಮ ಸ್ಥಾನಮಾನ ಸಿಗುತ್ತದೆ ಎಂಬುದಕ್ಕೆ ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ ನಾಯ್ಕಲ್ ನಿದರ್ಶನ.
ಮೂಲತಃ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದವರಾದ ಶರಣಭೂಪಾಲರಡ್ಡಿ ವೃತ್ತಿಯಲ್ಲಿ ವೈದ್ಯರಾದರೂ ರಾಜಕೀಯ ಕ್ಷೇತ್ರ ಸೆಳೆದಿದೆ. ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟ ಬಳಿಕ ಮೊದಲು ಆಯ್ಕೆ ಮಾಡಿಕೊಂಡಿದ್ದು ಕಾಂಗ್ರೆಸ್. ಯಾದಗಿರಿ ಅವಿಭಜಿತ ಕಲಬುರಗಿ ಜಿಲ್ಲೆಯಲ್ಲಿದ್ದಾಗ ನಾಯ್ಕಲ್ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಶರಣಭೂಪಾಲರಡ್ಡಿ ಪತ್ನಿ ಡಾ.ಶೈಲಜಾ ಚುನಾಯಿತರಾದರು. 2009 ರಲ್ಲಿ ಕಲಬುರಗಿ ಜಿಪಂಗೆ ಡಾ.ಶೈಲಜಾ ಅವಿರೋಧವಾಗಿ ಅಧ್ಯಕ್ಷರೂ ಆದರು.
ಕಾರಣಾಂತರಗಳಿಂದ 2012 ರಲ್ಲಿ ಕಾಂಗ್ರೆಸ್ ತೊರೆದ ಶರಣಭೂಪಾಲರಡ್ಡಿ ಅವರು ಬಿ.ಎಸ್.ಯಡಿಯೂರಪ್ಪ ಸ್ಥಾಪಿಸಿದ್ದ ಕೆಜೆಪಿಗೆ ಸೇರ್ಪಡೆಗೊಂಡ ಜಿಲ್ಲೆಯ ಮೊದಲ ಮುಖಂಡ. ಹಾವೇರಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಸಾವಿರಾರು ಬೆಂಬಲಿಗರೊಂದಿಗೆ ಬಿಎಸ್ವೈಗೆ ಸಾಥ್ ನೀಡಿದ್ದಲ್ಲದೆ 2013ರ ವಿಧಾನಸಭೆ ಚುನಾವಣೆಗೆ ಯಾದಗಿರಿ ಕ್ಷೇತ್ರದಿಂದ ಪ್ರಬಲ ಅಭ್ಯಥರ್ಿಯಾಗಿದ್ದರು. ಆದರೆ ಕೊನೇ ಕ್ಷಣದಲ್ಲಿ ಡಾ.ನಾಯ್ಕಲ್ಗೆ ಅವಕಾಶ ಸಿಗಲಿಲ್ಲ.
ದೃತಿಗೆಡದೆ ಬಿಎಸ್ವೈ ಹೆಜ್ಜೆಯಲ್ಲಿ ಹೆಜ್ಜೆ ಇರಿಸಿ ಬಿಜೆಪಿಗೆ ಸೇರಿದರು. ಕೆಜೆಪಿ ಜಿಲ್ಲಾಧ್ಯಕ್ಷರಾಗಿದ್ದ ಡಾ.ನಾಯ್ಕಲ್ ಅವರ ಸಂಘಟನಾ ಸಾಮಥ್ರ್ಯ ಕಂಡು ಜಿಲ್ಲಾಧ್ಯಕ್ಷ ಹುದ್ದೆ ಹುಡುಕಿಕೊಂಡು ಬಂದಿತು. 17 ತಿಂಗಳ ಅವಧಿಯಲ್ಲಿ ಪಕ್ಷ ಸಂಘಟಿಸಿದ ನಾಯ್ಕಲ್ 2018ರ ಚುನಾವಣೆಯಲ್ಲಿ ಟಿಕೆಟ್ಗಾಗಿ ಸಾಕಷ್ಟು ಪ್ರಯತ್ನ ನಡೆಸಿದರಾದರೂ ವಕರ್ೌಟ್ ಆಗಲಿಲ್ಲ. ಕೊನೆಗೆ ಯಡಿಯೂರಪ್ಪ ಅವರೇ ಡಾ.ನಾಯ್ಕಲ್ ನಿವಾಸಕ್ಕೆ ಆಗಮಿಸಿ ಮುಂದೆ ಸಕರ್ಾರದಲ್ಲಿ ಜವಾಬ್ದಾರಿಯುತ ಸ್ಥಾನ ಕೊಡುವುದಾಗಿ ಭರವಸೆ ನೀಡಿದ್ದನ್ನು ಕಾರ್ಯಕರ್ತರು ನೆನಪಿಸಿಕೊಳ್ಳುತ್ತಾರೆ.
ಸಾಲಬಾಧೆ ತಾಳದೆ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಸಾಂತ್ವನ ಹೇಳುವ ಮೂಲಕ ಆತ್ಮಸ್ಥೈರ್ಯ ತುಂಬಿ ಕೈಲಾದಷ್ಟು ಧನಸಹಾಯ ಮಾಡಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಗುಣಸ್ವಭಾವದ ಡಾ.ಶರಣಭೂಪಾಲರಡ್ಡಿ ಅವರನ್ನು ಕಂಡರೆ ರಾಜ್ಯ ನಾಯಕರಿಗೂ ಇಷ್ಟ. ಜಿಲ್ಲಾ ಬಿಜೆಪಿಯ ಎಲ್ಲ ಮುಖಂಡರೊಂದಿಗೆ ಸರಳ, ಸೌಜನ್ಯದಿಂದ ಬೆರೆಯುವ ಯುವ ಉತ್ಸಾಹಿ ಡಾ.ನಾಯ್ಕಲ್ ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಹುದ್ದೆಗಳನ್ನು ಅಲಂಕರಿಸಿದರೂ ಅಚ್ಚರಿಪಡುವಂತಿಲ್ಲ.