

ಕಲಬುರಗಿ: ಮಾನವ ಸಂಪಾದಿಸಿದ ಸಂಪತ್ತು ನಮಗಾಗಿ ಅಲ್ಲ, ಅದು ಎಲ್ಲರಿಗೂ ಎಂಬ ತತ್ವದಲ್ಲಿ ಸಮಾಜದ ಕಲ್ಯಾಣ ಅಡಗಿದೆ. ಸಮಾಜಕ್ಕಾಗಿ ಮಾಡುವ ತ್ಯಾಗ, ದಾನ, ಹಂಚಿಕೆ ಹಾಗೂ ಸಂಪೂರ್ಣ ಶರಣಾಗತಿ ಮಹಾ ದಾಸೋಹದ ಲಕ್ಷಣ ಎಂದು ಮಾತೋಶ್ರೀ ಡಾ.ದಾಕ್ಷಾಯಣಿ ಅಪ್ಪ ನುಡಿದರು.
ನಗರದ ಶ್ರೀ ಶರಣಬಸವೇಶ್ವರ ಮಹಾದಾಸೋಹ ಮನೆಯಲ್ಲಿ ಸುಭಾಶ್ಚಂದ್ರ ಪಾಟೀಲ್ ಜನಕಲ್ಯಾಣ ಸ್ಮಾರಕ ಟ್ರಸ್ಟ್ನಿಂದ ಸೋಮವಾರ ಸಂಜೆ ಆಯೋಜಿಸಿದ್ದ ಗೌಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಕಲ್ಯಾಣ ಕರ್ನಾಟಕದ ಕಲಬುರಗಿಯನ್ನು ಕರ್ಮಭೂಮಿಯನ್ನಾಗಿಸಿ ವಿಶ್ವಾತ್ಮಕ ನೆಲೆಗಟ್ಟಿನಲ್ಲಿ ಶ್ರೀ ಶರಣಬಸವೇಶ್ವರ ಸಂಸ್ಥಾನವನ್ನು ಬೆಳೆಸಿದ ಕೀರ್ತಿ ಶ್ರೀ ಡಾ.ಶರಣಬಸಪ್ಪ ಅಪ್ಪ ಅವರಿಗೆ ಸಲ್ಲುತ್ತದೆ ಎಂದು ಜಗದ್ಗುರು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ನುಡಿದರು.
ಉದ್ಯಮಿ ನೀಲಕಂಠರಾವ ಮೂಲಗೆ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ದೇಶಮುಖ, ಡಾ.ನಿದೀಶ ನಿಷ್ಠಿ, ಡಾ.ಅಲ್ಲಂಪ್ರಭು ದೇಶಮುಖ ಮಾತನಾಡಿದರು. ಕಸಾಪ ಗೌರವ ಕಾರ್ಯದರ್ಶಿ ಪ್ರೊ.ಯಶವಂತರಾಯ ಅಷ್ಠಗಿ ಪ್ರಾಸ್ತಾವಿಕ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ಶರಣಗೌಡ ಪಾಟೀಲ್ ಪಾಳಾ ಮಾತನಾಡಿದರು.
ಶಿವರಾಜ ಅಂಡಗಿ, ಬಿ.ಎಚ್.ನಿರಗುಡಿ, ಸುರೇಶ ನಂದಗಾAವ, ಶಿವರಾಜ ಶಾಸ್ತಿç ಹೇರೂರ, ಕಲ್ಯಾಣಕುಮಾರ ಶೀಲವಂತ, ಕಲ್ಯಾಣರಾವ ಪಾಟೀಲ್, ಶರಣರಾಜ ಛಪ್ಪರಬಂದಿ, ಡಾ.ಶರಣಬಸಪ್ಪ ವಡ್ಡನಕೇರಿ, ಅಂಬಾರಾಯ ಕೋಣೆ, ಮಾಲಾ ಕಣ್ಣಿ, ಜಗದೀಶ ಮರಪಳ್ಳಿ, ರಾಜೇಂದ್ರ ಝಳಕಿ, ಬಸವಂತರಾಯ ಕೋಳಕೂರ, ಶಿವಯೋಗಿ ಭಜಂತ್ರಿ, ಗುಂಡಪ್ಪ ನಾಟಿಕರ ಇತರರಿದ್ದರು.