ಡಾ.ಶಂಕರೇಗೌಡರ ಬಗ್ಗೆ ನೀವು ಲೇಖನ ಬರೆಯಿರಿ

IMG-20201102-WA0058
Published on

ಮಂಡ್ಯ: ಐದು ರೂಪಾಯಿ ವೈದ್ಯರೆಂದೇ ಮನೆ ಮಾತಾಗಿರುವ ಚರ್ಮರೋಗ ತಜ್ಞ ಡಾ.ಎಸ್.ಸಿ.ಶಂಕರೇಗೌಡ ಅವರ ಕುರಿತ ಅಭಿನಂದನಾ ಗ್ರಂಥ ಹೊರ ತರಲಾಗುತ್ತಿದೆ ಎಂದು ಗ್ರಂಥದ ಸಂಪಾದಕ ಡಾ.ಪ್ರದೀಪಕುಮಾರ ಹೆಬ್ರಿ ಹೇಳಿದರು.
ಅಭಿಮಾನಿಗಳು, ಹಿತೈಷಿಗಳು, ಒಡನಾಡಿಗಳು, ಕವಿಗಳು, ಸಾಹಿತಿಗಳು, ಸಹಪಾಠಿಗಳು, ಸಹೋದ್ಯೋಗಿಗಳು, ಬಂಧು-ಮಿತ್ರರು ಹಾಗೂ ಪತ್ರಕರ್ತರು ಸೇರಿದಂತೆ ಅವರ ಬಗ್ಗೆ ‘ನಾವು ಕಂಡಂತೆ ಡಾ.ಎಸ್.ಸಿ.ಶಂಕರೇಗೌಡರ’ ವಿಷಯಕ್ಕೆ ಸಂಬಂಧಿಸಿದಂತೆ ಕವನ, ಲೇಖನ, ಪ್ರಬಂಧ, ಚಿತ್ರಗಳನ್ನು ಬರೆದು ಕಳುಹಿಸಬಹುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನ.30ರೊಳಗೆ ಲೇಖನ, ಕವನ, ಪ್ರಬಂಧ, ಚಿತ್ರಗಳನ್ನು ಡಾ.ಪ್ರದೀಪಕುಮಾರ ಹೆಬ್ರಿ, ಸಂಪಾದಕರು, ಅಭಿನಂದನಾ ಗ್ರಂಥ, 287, ದೃಶ್ಯ, ಹಾಲಹಳ್ಳಿ ಮುಖ್ಯರಸ್ತೆ, ಮಂಡ್ಯ-571401 ವಿಳಾಸಕ್ಕೆ ಕಳುಹಿಸಬಹುದು ಎಂದು ತಿಳಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ, ಪ್ರೊ.ಎಸ್.ಮಂಜು, ಚಂದ್ರಶೇಖರ ದ.ಕೋ.ಹಳ್ಳಿ, ಹೊಳಲು ಶ್ರೀಧರ್, ಬಿ.ಜಿ.ಉಮಾ, ಡಾ.ಗೋಪಾಲಕೃಷ್ಣ ಗುಪ್ತ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net