ಪಂ. ಪಂಡರಿನಾಥಚಾರ್ಯ ಗಲಗಲಿ ಪ್ರಶಸ್ತಿಗೆ ಆಯ್ಕೆ

dr satyamurthy
Published on

ಹುಬ್ಬಳ್ಳಿ: ಈ ವರ್ಷದ ಪಂ. ಪಂಡರಿನಾಥಚಾರ್ಯ ಗಲಗಲಿ ಪ್ರಶಸ್ತಿಗೆ ಡಾ. ಸತ್ಯಮೂರ್ತಿ ಆಚಾರ್ಯ ಕರಣಂ ಆಯ್ಕೆಯಾಗಿದ್ದಾರೆ.

ಅಧೋಕ್ಷಜ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರಲ್ಲಿ ವೇದಾಧ್ಯಯನವನ್ನು ಮಾಡಿರುವ ಡಾ. ಸತ್ಯಮೂರ್ತಿ ಅವರು ಶ್ರೇಷ್ಠ ವಾಗ್ಮಿಗಳು ಹಾಗೂ ವಿಶೇಷ ಉಪನ್ಯಾಸಕರಾಗಿದ್ದಾರೆ. ಪ್ರಶಸ್ತಿಯನ್ನು ರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ ದಿನ (ಆ. 10ರಂದು ಸಂಜೆ 7 ಗಂಟೆಗೆ) ಹುಬ್ಬಳ್ಳಿ ವಿಶ್ವೇಶ್ವರನಗರ ಶಾಂತಿ ಕಾಲನಿಯ ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ ಸನ್ನಿದಿಯಲ್ಲಿ ಕೊಡಲಾಗುವುದು. ಪ್ರಶಸ್ತಿ ಪತ್ರ, ಸ್ಮರಣ ಫಲಕ, ಶಾಲು ಹಾಗೂ 10 ಸಾವಿರ ರೂಪಾಯಿ ನಗದು ಹೊಂದಿದೆ ಎಂದು ವಾಸುದೇವಾಚಾರ್ಯ ಗಲಗಲಿ ಹಾಗೂ ಹುಬ್ಬಳ್ಳಿ ಶಾಂತಿ ಕಾಲನಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಸೇವಾ ಸಮಿತಿಯ ಅಧ್ಯಕ್ಷ ವಿಷ್ಣುತೀರ್ಥ ಕಲ್ಲೂರಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net