ಮಧುಮೇಹ, ಹೃದ್ರೋಗ ನಿಯಂತ್ರಣಕ್ಕೆ ಡಾ. ಸತ್ತೂರ ಸಲಹೆ

h14-g.b.sattur
Published on

ಹುಬ್ಬಳ್ಳಿ: ಪ್ರೊ. ಆಸ್ಟಿನ್ ಇ. ಡೊಯ್ಲೆ ಸ್ಮರಣಾರ್ಥ ಉತ್ತರಪ್ರದೇಶದ ಲಕ್ನೋದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ನ್ಯಾಷನಲ್ ಕಾನ್ಪರೆನ್ಸ್​ನಲ್ಲಿ ಹುಬ್ಬಳ್ಳಿಯ ಖ್ಯಾತ ಮಧುಮೇಹ ಹಾಗೂ ಹೃದ್ರೋಗ ತಜ್ಞ ಡಾ. ಜಿ.ಬಿ. ಸತ್ತೂರ ಅವರು ವಿಶೇಷ ಉಪನ್ಯಾಸ ನೀಡಿದ್ದಾರೆ. ರಕ್ತದ ಒತ್ತಡ ಮತ್ತು ತೀವ್ರತರಹದ ವ್ಯಾಯಾಮದ ಕುರಿತು ಉಪನ್ಯಾಸ ನೀಡಿ, ದೇಶವೇ ಗಮನ ಸೆಳೆಯುವಂತೆ ಮಾಡಿದ್ದಾರೆ.

‘ಪ್ರತಿಯೊಬ್ಬರಿಗೂ ವ್ಯಾಯಾಮ ಅತ್ಯಗತ್ಯ. ಅಲ್ಲದೆ, 35 ವರ್ಷ ಮೇಲ್ಪಟ್ಟವರು ಹಾಗೂ ಮಧುಮೇಹ ಸೇರಿ ವಿವಿಧ ಕಾಯಿಲೆ ಇರುವವರು ತಜ್ಞ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಂಡು ಅವರ ಸಲಹೆ ಮೇರೆಗೆ ವ್ಯಾಯಾಮ ಮಾಡಬೇಕು. ಕಾಯಿಲೆಗಳಿಗೆ ಅನುಗುಣವಾಗಿ ವ್ಯಾಯಾಮ ಮಾಡಿದರೆ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಯಾರು ನಿತ್ಯದ ಜೀವನದಲ್ಲಿ ವ್ಯಾಯಾಮ ರೂಢಿಸಿಕೊಳ್ಳುತ್ತಾರೋ ಅವರು ಸದಾ ಯೌವನದಿಂದ ಜೀವಿಸುತ್ತಾರೆ. ಯಾರು ವ್ಯಾಯಾಮ ಮರೆಯುತ್ತಾರೋ ಅವರು ಆಸ್ಪತ್ರೆಯ ಬೆಡ್​ಗಳ ಮೇಲೆ ಮಲಗಿರುತ್ತಾರೆ ಎಂದು ಮಾರ್ವಿುಕವಾಗಿ ನುಡಿದು ಗಮನ ಸೆಳೆದಿದ್ದಾರೆ.

ಡಾ. ಆಸ್ಟಿನ್ ಡೊಯ್ಲೆ ಸ್ಮರಣಾರ್ಥ ಖ್ಯಾತ ವೈದ್ಯರಿಂದ ಪ್ರತಿ ವರ್ಷ ವಿಶೇಷ ಉಪನ್ಯಾಸ ಕೊಡಿಸಲಾಗುತ್ತಿದೆ. ಈ ಬಾರಿ ಹುಬ್ಬಳ್ಳಿಯ ಡಾ. ಜಿ.ಬಿ. ಸತ್ತೂರ ಅವರು ಆಯ್ಕೆಯಾಗಿ ವಿಶೇಷ ಉಪನ್ಯಾಸ ನೀಡಿರುವುದು ಗಮನಾರ್ಹ. ಡಾ.ನರಸಿಂಗ್ ವರ್ವ, ಡಾ. ಅನೂಜ್ ಮಹೇಶ್ವರಿ ಈ ಸಂದರ್ಭದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net