'ಆದರ್ಶ ಜೈನ ಮಹಿಳಾರತ್ನ' ಪ್ರಶಸ್ತಿಗೆ ಡಾ.ಸರಸ್ವತಿ ವಿಜಯಕುಮಾರ್​ ಆಯ್ಕೆ

Saraswathi Vijayakumar
Published on

ಬೆಂಗಳೂರು: ಪಂಡಿತರತ್ನ ಎ.ಶಾಂತಿರಾಜ ಶಾಸಿ ಟ್ರಸ್ಟ್​ ವತಿಯಿಂದ ನೀಡುವ 2023ನೇ ಸಾಲಿನ 'ಆದರ್ಶ ಜೈನ ಮಹಿಳಾರತ್ನ' ಪ್ರಶಸ್ತಿಗೆ ಮೈಸೂರಿನ ಸಾಹಿತಿ ಡಾ. ಸರಸ್ವತಿ ವಿಜಯಕುಮಾರ್​ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು 25,000 ರೂ. ನಗದು, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ ಒಳಗೊಂಡಿದೆ. ಅ.1 ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಟ್ರಸ್ಟ್​ನ ಅಧ್ಯಕ್ಷ ಎಸ್.ಜಿತೇಂದ್ರ ಕುಮಾರ್, ವಿದ್ಯಾಧರ್, ಪಿ.ವೈ.ರಾಜೇಂದ್ರ ಕುಮಾರ್, ಪದ್ಮರಾಜ ದಂಡಾವತಿ ಹಾಗೂ ಜಿ.ಪಿ.ನಾಗೇಂದ್ರ ಪ್ರಸಾದ್ ಅವರನ್ನು ಒಳಗೊಂಡ ಸಮಿತಿಯ ಡಾ. ಸರಸ್ವತಿ ವಿಜಯಕುಮಾರ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net