ಡಾ.ಸಂಕೇಶ್ವರ ಸಾಮಾಜಿ ಕಳಕಳಿ ಶ್ಲಾಘನೀಯ - ಶಿವಬಸವ ಸ್ವಾಮೀಜಿ

0101
Published on

ಅಥಣಿ: ಮುದ್ರಣ ಕ್ಷೇತ್ರದಲ್ಲಿ ಡಾ.ವಿಜಯ ಸಂಕೇಶ್ವರ ಅವರ ಸಾಧನೆ ಅಪ್ರತಿಮ. ಗುಣಮಟ್ಟ ಮತ್ತು ಸಾಮಾಜಿಕ ಕಳವಳಿ ಅವರ ಜೀವಾಳವಾಗಿದೆ. ಹೀಗಾಗಿ ಅವರು ಮುಟ್ಟಿದೆಲ್ಲ ಚಿನ್ನವಾಗಿದೆ ಎಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ಹೇಳಿದ್ದಾರೆ.

ಪಟ್ಟಣದ ಗಚ್ಚಿನಮಠದಲ್ಲಿ ಮಂಗಳವಾರ ವಿಜಯವಾಣಿ ನೂತನ 2020ರ ವರ್ಷದ ದಿನದರ್ಶಿಕೆ ಬಿಡುಗಡೆ ಮಾಡಿ ಮಾತನಾಡಿ, ಮಾನವಿಯ ಮೌಲ್ಯಗಳನ್ನು ಪತ್ರಿಕೆಯ ಮೂಲಕ ಪ್ರಸಾರ ಮಾಡುವ ಜತೆಗೆ ಉತ್ತಮ ಸಮಾಜ ನಿರ್ಮಾಣದಲ್ಲಿ ವಿಜಯವಾಣಿ ದಿನಪತ್ರಿಕೆ ಸಾಧನೆ ಮಾಡುತ್ತಿದೆ. ಅದಕ್ಕೆಲ ಪ್ರೇರಕ ಶಕ್ತಿಯಾಗಿ ವಿಜಯ ಸಂಕೇಶ್ವರ ಅವರು ವಿಆರ್‌ಎಲ್ ಸಮೂಹ ಸಂಸ್ಥೆಯ ಮೂಲಕ ಸೇವೆ ಸಲ್ಲಿಸುತಿದ್ದಾರೆ ಎಂದರು.

ಮುದ್ರಣ ವಿಭಾಗದಲ್ಲಿ ಬಹಳಷ್ಟು ಪೈಪೋಟಿ ಇದ್ದರೂ ಕಡಿಮೆ ದರದಲ್ಲಿ ಪತ್ರಿಕೆ ನೀಡಿ ಓದುಗರಿಗೆ ಅನುಕೂಲ ಮಾಡಿದ್ದಾರೆ. ಹೆಚ್ಚು ಹೆಚ್ಚು ಓದುವ ಮನಸ್ಸುಗಳನ್ನು ಪತ್ರಿಕೆಯತ್ತ ಸೆಳೆಯುತ್ತಿರುವುದು ಮಹತ್ವದ ಕೆಲಸವಾಗಿದೆ. ಅದೇ ರೀತಿ ನೂತನ ವರ್ಷದ ದಿನದರ್ಶಿಕೆಯಲ್ಲಿ ಎಲ್ಲ ಮಾಹಿತಿ ನೀಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

ಮುರುಘೇಂದ್ರ ಶಿವಯೋಗಿಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ನೂತನ ವರ್ಷದ ದಿನದರ್ಶಿಕೆಯನ್ನು ಶರೀಗಳು ಬಿಡುಗಡೆ ಮಾಡಿದರು. ವಿಜಯವಾಣಿ ವಿತರಕ ಮತ್ತು ವರದಿಗಾರ ರಾಜು ಗಾಲಿ, ಸಮಾಜ ಸೇವಕ ಈರಣ್ಣ ಅಡಗಲ್ಲ, ವಿವೇಕ ಮೆಣಸಿ, ಗುಂಡು ಸೊಳಸಿ, ಸೋಮಶೇಖರ ಶೀಲವಂತ, ವೀರಯ್ಯ ಹಿರೇಮಠ, ಬಸವರಾಜ ಕಾವೇರಿ, ಶಿವಾಜಿ ಪವಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net