ಒತ್ತಡ ನಿವಾರಿಸಲು ಸಂಗೀತ ಸಹಕಾರಿ

Dr. Sanjay Kadlimatti, Patriotic Song Contest, Vijayapura, Music,
ವಿಜಯಪುರದ ಎವಿಎಸ್ ಆಯುರ್ವೇದ ಮಹಾವಿದ್ಯಾಲಯದಲ್ಲಿ ನಡೆದ ಅಂತರ ಕಾಲೇಜು ದೇಶಭಕ್ತಿ ಗೀತೆ ಸ್ಪರ್ಧೆಯನ್ನು ಡಾ. ಸಂಜಯ ಕಡ್ಲಿಮಟ್ಟಿ ಉದ್ಘಾಟಿಸಿದರು. ಮುತ್ತುರಾಜ ಮದನಭಾವಿ, ಡಾ. ಡಿ.ಎನ್. ಧರಿ, ಡಾ. ಸೀತಾ ಬಿರಾದಾರ, ಸುನಂದಾ ಘಾಟಗೆ ಇದ್ದಾರೆ.
Published on

ವಿಜಯಪುರ: ಇಂದಿನ ಒತ್ತಡದ ಜೀವನ ನಿರ್ವಹಿಸಲು ಸಂಗೀತ ಮಹತ್ವದ ಪಾತ್ರ ವಹಿಸುತ್ತದೆ ಎಂದು ಬಿಎಲ್ಡಿಇ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಹೇಳಿದರು.

ನಗರದ ಬಿಎಲ್‌ಡಿಇ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯದ ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಲ್ಲಿ ಶನಿವಾರ 76ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಅಂತರ ಕಾಲೇಜು ದೇಶಭಕ್ತಿ ಗೀತೆ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸಂಗೀತಕ್ಕೆ ಮಾನಸಿಕ ಮತ್ತು ದೈಹಿಕ ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ. ಹೀಗಾಗಿ ಸಂಗೀತದ ಕಡೆ ಗಮನ ಹರಿಸಬೇಕು ಎಂದು ಅವರು ಹೇಳಿದರು. ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ. ಡಿ.ಎನ್. ಧರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸ್ಪರ್ಧೆಯಲ್ಲಿ ವೇದಾಂತ ಬಿಸಿಎ ಕಾಲೇಜಿನ ಸಾಕ್ಷಿ ಹಿರೇಮಠ ಪ್ರಥಮ, ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮಾಳವಿಕ ಜೋಶಿ ದ್ವಿತೀಯ ಹಾಗೂ ಬಿಎಲ್ಡಿಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಇಂಜಿನಿಯರಿಂಗ್ ಕಾಲೇಜಿನ ಸುನಯನಾ ದೇಶಪಾಂಡೆ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ಪಾರಿತೋಷಕ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಸಂಗೀತ ವಿದ್ವಾಂಸರಾದ ಮುತ್ತುರಾಜ ಮದನಭಾವಿ ಮತ್ತು ಸುನಂದಾ ಘಾಟಗೆ ನಿರ್ಣಾಯಕರಾಗಿ ಪಾಲ್ಗೋಂಡರು. ಸಹ ಕಾರ್ಯದರ್ಶಿ ಡಾ. ವಿಜಯಲಕ್ಷ್ಮಿ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಡಾ. ಸೀತಾ ಬಿರಾದಾರ, ಸಾಂಸ್ಕೃತಿಕ ವಿಭಾಗದ ಸಂಯೋಜಕಿ ಡಾ. ಸುಮಾ ಮತ್ತು ಡಾ. ದಾಮೋದರ ಉಪಸ್ಥಿತರಿದ್ದರು. ಡಾ. ಸುಮಾ ಕಗ್ಗೋಡ ವಂದಿಸಿದರು. ನಗರದ 20ಕ್ಕೂ ಹೆಚ್ಚು ಮಹಾವಿದ್ಯಾಲಯಗಳ ಒಟ್ಟು 40 ಸ್ಪರ್ಧಾಳುಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net