

ಗೊಳಸಂಗಿ: ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲಿ ಕಣ್ಣು ಅತ್ಯಮೂಲ್ಯ ಅಂಗ. ಅದರ ನಿಷ್ಕಾಳಜಿ ತೋರಿದರೆ ಜಗತ್ತೆ ಕತ್ತಲಾಗಿ ಕಾಣುತ್ತದೆ ಎಂದು ನೇತ್ರತಜ್ಞ ಡಾ.ಸಂಗಮೇಶ ಪಾಟೀಲ ಹೇಳಿದರು.
ಸಮೀಪದ ಮುತ್ತಗಿ ಗ್ರಾಮದ ರುದ್ರಸ್ವಾಮೀಜಿ ಯೂಥ್ ಫೌಂಡೇಷನ್, ರೈತಮಿತ್ರ ಕಾಶಿನಾಥ ಪತ್ತಾರ ಫೌಂಡೇಷನ್ ಹಾಗೂ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನೇತ್ರ ಉಚಿತ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿಕ್ಷಕ ವೈ.ಕೆ.ಪತ್ತಾರ ಮಾತನಾಡಿ, ಕಣ್ಣು ಮನುಷ್ಯನ ಬದುಕಿನ ದಾರಿದೀಪವಾಗಿದ್ದು, ಜೋಪಾನವಾಗಿ ಕಾಪಾಡಿಕೊಳ್ಳಬೇಕು ಎಂದರು. ವೇ.ಶಿವಕುಮಾರಸ್ವಾಮಿ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ರೈತ ಮಹಿಳೆ ಶಾರದಾಬಾಯಿ ಪತ್ತಾರ ಅಧ್ಯಕ್ಷತೆ ವಹಿಸಿದ್ದರು.
ವೈದ್ಯಕೀಯ ಸಿಬ್ಬಂದಿ ಗೀತಾ ಪ್ಯಾಟಿಗೌಡ್ರ, ಶ್ವೇತಾ ಬಗಲಿ, ಅಕ್ಷತಾ ಗಡೇದ, ಆಶ್ೀ ಮುಲ್ಲಾ, ಮೇಹಕ್ ದಳವಾಯಿ, ಸರ್ವೇಶ ಪಾಟೀಲ, ಪ್ರಮುಖರಾದ ರೇವಣಸಿದ್ಧಯ್ಯ ಹಿರೇಮಠ, ಸಂಗಪ್ಪ ಮಾಳಜಿ, ಎ.ಎ.ಟಕ್ಕಳಕಿ, ಶಿವಲಿಂಗಪ್ಪ ಮಾಳಜಿ, ಗಿರಿಧರ ಬಿರಾದಾರ, ಮಂಜುನಾಥ ಮಾಳಜಿ, ಐ.ಡಿ.ಬಿರಾದಾರ ಇತರರಿದ್ದರು. 153 ಜನರು ಕಣ್ಣು ತಪಾಸಣೆಗೊಳಪಟ್ಟಿದ್ದು, 53 ಜನರನ್ನು ಶಸ ಚಿಕಿತ್ಸೆಗೆ ಬರುವಂತೆ ಸೂಚಿಸಲಾಯಿತು.