ಡಾ. ಸಂಧ್ಯಾ ಶೆಣೈಗೆ ಅಗ್ರ ಶೇ.2 ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ

gggggggg
Published on





ಮಂಗಳೂರು : ಮುಕ್ಕದಲ್ಲಿರುವ ಶ್ರೀನಿವಾಸ್ ವಿಶ್ವವಿದ್ಯಾಲಯದ ಅಭಿಯಾಂತ್ರಿಕ ಮತ್ತು ತಾಂತ್ರಿಕ ಕಾಲೇಜಿನ ಮೆಟೀರಿಯಲ್ಸ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಸಂಶೋಧನಾ ವಿಜ್ಞಾನಿ ಡಾ. ಸಂಧ್ಯಾ ಶೆಣೈ ಅವರು ಅಂತಾರಾಷ್ಟ್ರೀಯ ಮಟ್ಟದ ಅಗ್ರ ಶೇ.2 ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಸ್ಟಾೃನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಪ್ರಕಟಿಸಲಾದ ಪ್ರಮಾಣೀಕೃತ ಉಲ್ಲೇಖ ಸೂಚಕಗಳ ನವೀಕರಿಸಿದ ವಿಜ್ಞಾನ-ವ್ಯಾಪಕ ಲೇಖಕ ಡೇಟಾಬೇಸ್‌ನಲ್ಲಿ ಅಗ್ರ ಶೇ.2 ವಿಜ್ಞಾನಿಗಳ ಪಟ್ಟಿಯಲ್ಲಿ ಪ್ರಸ್ತುತ ವರ್ಷದಲ್ಲಿ ಸಂಯೋಜಿತ ಸ್ಕೋರ್ ಆಧರಿಸಿ ಇವರು ಸ್ಥಾನ ಪಡೆದಿದ್ದಾರೆ.
ಡಾ. ಸಂಧ್ಯಾ ಶೆಣೈ ಅವರ ಸಂಶೋಧನೆಯು ಥರ್ಮೋ ಇಲೆಕ್ಟ್ರಿಕ್ ಮತ್ತು ಫೋಟೊಕ್ಯಾಟಲಿಟಿಕ್ ಗುಣಲಕ್ಷಣಗಳ ಮೇಲೆ ಕೇಂದ್ರೀಕರಿಸುವ ಶಕ್ತಿ ಮತ್ತು ಪರಿಸರದ ಅನ್ವಯಗಳ ವಸ್ತುಗಳನ್ನು ಒಳಗೊಂಡಿದೆ. ಇವರು 2023ರಲ್ಲಿ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ ಬೆಂಗಳೂರಿನಿಂದ ಪ್ರತಿಷ್ಠಿತ ಅಸೋಸಿಯೇಟ್‌ಶಿಪ್ ಸಹ ಪಡೆದಿದ್ದಾರೆ.
ಕಳೆದ ಮೂರು ವರ್ಷಗಳಿಂದ ಸತತವಾಗಿ ಲಂಡನ್‌ನ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿಯಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಶೇ.5ಕ್ಕಿಂತ ಹೆಚ್ಚು ಉಲ್ಲೇಖಿತ ಲೇಖಕಿ ಎಂಬ ಪ್ರಮಾಣಪತ್ರವನ್ನು ಪಡೆದಿದ್ದಾರೆ. ಇದರ ಜತೆಗೆ ಅವರು 2023 ರಲ್ಲಿ ಲಂಡನ್‌ನ ಆರ್‌ಎಸ್‌ಸಿಯಿಂದ ವಸ್ತು ವಿಜ್ಞಾನ ಮತ್ತು ನ್ಯಾನೊ ಸೈನ್ಸ್‌ನಲ್ಲಿ ಪ್ರಭಾವಶಾಲಿ ಕೆಲಸವನ್ನು ಪ್ರಕಟಿಸುವ ಅತ್ಯುತ್ತಮ ಪ್ರಮುಖ ಮಹಿಳಾ ಸಂಶೋಧಕರಲ್ಲಿ ಒಬ್ಬರಾಗಿ ಆಯ್ಕೆಯಾಗಿದ್ದಾರೆ.
ಡಾ. ಸಂಧ್ಯಾ ಶೆಣೈ ಅವರನ್ನು ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಸಿಎ. ಎ.ರಾಘವೇಂದ್ರ ರಾವ್ ಹಾಗೂ ಸಹಕುಲಾಧಿಪತಿ ಡಾ.ಎ.ಶ್ರೀನಿವಾಸ ರಾವ್ ಅಭಿನಂದಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net