ಡಾ.ಎಸ್.ಆರ್.ಕೌಲಗುಡ್ಡ ಇನ್ನಿಲ್ಲ

IMG20250919201738.jpg
Published on

ಧಾರವಾಡ: ನಗರದ ಹೆಸರಾಂತ ಮೂಲವ್ಯಾಧಿ ಚಿಕಿತ್ಸಾ ತಜ್ಞ, ಮಾಳಮಡ್ಡಿ 5ನೇ ಕ್ರಾಸ್ ನಿವಾಸಿಯಾಗಿದ್ದ ಡಾ.ಎಸ್.ಆರ್.ಕೌಲಗುಡ್ಡ (93) ಅವರು ಗುರುವಾರ ನಿಧನರಾದರು. ಅವರಿಗೆ ಪತ್ನಿ, ಪುತ್ರಿ, ಇಬ್ಬರು ಪುತ್ರರು ಇದ್ದಾರೆ. ಕೌಲಗುಡ್ಡ ಅವರು ಮಾನವೀಯತೆಯುಳ್ಳ ಶ್ರೇಷ್ಠ ವೈದ್ಯರಾಗಿದ್ದರು. 7 ದಶಕಗಳ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಆರ್ಥಿಕವಾಗಿ ಹಿಂದುಳಿದವರ ಬಗ್ಗೆ ಸದಾ ಕಾಳಜಿ ಮಾಡುತ್ತಿದ್ದರು. ಹುಬ್ಬಳ್ಳಿ ಕೆಎಂಸಿಆರ್‌ಐ ಪ್ರಾಧ್ಯಾಪಕರಾಗಿದ್ದರು. ಧಾರವಾಡ ಜರ್ಮನ್ ಆಸ್ಪತ್ರೆಯಲ್ಲಿ 3 ದಶಕಗಳ ಕಾಲ ವೃತ್ತಿ ನಿರ್ವಹಿಸಿದ್ದಾರೆ. ರಾಜ್ಯ, ರಾಷ್ಟ್ರದಲ್ಲಿ ಹೆಸರು ಮಾಡಿರುವ ಬಹಳಷ್ಟು ವೈದ್ಯರು ಇವರ ಶಿಷ್ಯಂದಿರು. ವೈದ್ಯಕೀಯ ವೃತ್ತಿ ಜತೆಗೆ ಧಾರ್ಮಿಕ ಹಾಗೂ ಸಮಾಜಸೇವೆಯಲ್ಲೂ ತೊಡಗಿಸಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net