

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತದ ಕೃಷಿ ಕ್ಷೇತ್ರದ ಸುಭದ್ರ ಭವಿಷ್ಯಕ್ಕೆ ಹವಾಮಾನ ವೈಪರಿತ್ಯ ನಿರ್ವಹಣೆ ಅಗತ್ಯ. ಹವಾಮಾನ ವೈಪರೀತ್ಯಕ್ಕೆ ಸಮಗ್ರ ಕೃಷಿ ಪದ್ಧತಿಗಳಲ್ಲಿ ಬದಲಾವಣೆ ಮತ್ತು ಅಭಿವೃದ್ಧಿ ಅವಶ್ಯಕ ಎಂದು ಪದ್ಮಶ್ರೀ ಡಾ. ಎಸ್. ಅಯ್ಯಪ್ಪನ್ ಹೇಳಿದರು.
ನಗರದ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ದಿ. ಡಾ. ಎಸ್.ಎ. ಪಾಟೀಲ ಸ್ಮರಣಾರ್ಥ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ. ಎಸ್.ಎ. ಪಾಟೀಲರು ಕೃಷಿ ಅಭಿವೃದ್ಧಿಯ ಹರಿಕಾರ ಹಾಗೂ ರೈತರ ಶ್ರೇಯೋಭಿವೃದ್ಧಿಗಾಗಿ ತಮ್ಮ ಜೀವಿತಾವಽಯನ್ನು ಮುಡಿಪಾಗಿಟ್ಟಿದ್ದರು. ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ನಿರ್ದೇಶಕರಾಗಿ ಅನೇಕ ಕೃಷಿ ವಿಜ್ಞಾನಿಗಳು, ವಿದ್ಯಾರ್ಥಿಗಳು, ಅಽಕಾರಿಗಳು, ನೀತಿ ನಿರೂಪಕರಿಗೆ ಸೂರ್ತಿದಾಯಕ ವ್ಯಕ್ತಿತ್ವ ಹೊಂದಿದ್ದರು ಎಂದರು.
ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನಿಗಳು, ಶಿಕ್ಷಕರು, ಡಾ. ಪಾಟೀಲ ಕುಟುಂಬದವರಿದ್ದರು.