ಉಪನ್ಯಾಸ 15ರಂದು

WhatsApp Image 2024-08-03 at 4.17.49 PM
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕೃಷಿ ಅಭಿವೃದ್ಧಿಯ ಹರಿಕಾರ ಹಾಗೂ ರೈತರ ಶ್ರೇಯೋಭಿವೃದ್ಧಿಗಾಗಿ ಜೀವಿತಾವಽಯನ್ನು ಮುಡಿಪಾಗಿಟ್ಟಿದ್ದ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎಸ್.ಎ. ಪಾಟೀಲ ಸ್ಮರಣಾರ್ಥ ಆ. 5ರಂದು ಅವರ ಜನ್ಮ ದಿನದಂದು ಉಪನ್ಯಾಸ ಕಾರ್ಯಕ್ರಮವನ್ನು ವಿಶ್ವವಿದ್ಯಾಲಯ ಆವರಣದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಆಯೋಜಿಸಲಾಗಿದೆ. ಮಧ್ಯಾಹ್ನ 3 ಗಂಟೆಗೆ ಜರುಗುವ ಕಾರ್ಯಕ್ರಮದ ಅತಿಥಿಯಾಗಿ ಪದ್ಮಶ್ರೀ ಡಾ. ಎಸ್. ಅಯ್ಯಪ್ಪನ್ ಪಾಲ್ಗೊಳ್ಳುವರು. ವಿಶ್ರಾಂತ ಕುಲಪತಿ ಡಾ. ಜೆ.ವಿ. ಗೌಡ ಹಾಗೂ ಅನ್ನಪೂರ್ಣ ಎಸ್. ಪಾಟೀಲ ಗೌರವ ಉಪಸ್ಥಿತರಿರುವರು. ಕೃಷಿ ವಿವಿ ಕುಲಪತಿ ಡಾ. ಎಸ್.ಎ. ಪಾಟೀಲ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net