ಇಎನ್ ಟಿ ತಜ್ಞ ಡಾ. ರವೀಂದ್ರ ಗದಗ ಆಯ್ಕೆ

IMG-20251024-WA0025-1.jpg
Published on

ಹುಬ್ಬಳ್ಳಿ: ಆಂಧ್ರಪ್ರದೇಶದ ವಿಜಯವಾಡದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ದಕ್ಷಿಣ ಭಾರತದ ಕಿವಿ, ಮೂಗು, ಗಂಟಲು (ಇಎನ್ ಟಿ) ತಜ್ಞರ ಸಮ್ಮೇಳನದಲ್ಲಿ ಹುಬ್ಬಳ್ಳಿಯ ಕೆಎಂಸಿಆರ್ ಐ ಪ್ರಾಧ್ಯಾಪಕ ಡಾ. ರವೀಂದ್ರ ಗದಗ ಅವರು ದಕ್ಷಿಣ ಭಾರತ ರಾಜ್ಯಗಳ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಸಂಘಟನೆಯ ಕಾರ್ಯದಶಿರ್ಯಾಗಿ ಬೆಂಗಳೂರಿನ ಡಾ. ಸೋಮಸುಂದರ್ ಮತ್ತು ಖಜಾಂಚಿಯಾಗಿ ಡಾ. ಚಿದಾನಂದ ದೇವಸಮುದ್ರ ಅವರನ್ನು ಆಯ್ಕೆ ಮಾಡಲಾಗಿದೆ. 2026ರಲ್ಲಿ ದಕ್ಷಿಣ ರಾಜ್ಯಗಳ ಸಮ್ಮೇಳನವನ್ನು ಹುಬ್ಬಳ್ಳಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net