ಗ್ರಂಥಾಲಯ ಕ್ಷೇತ್ರಕ್ಕೆ ಡಾ.ರಂಗನಾಥನ್​ ಕೊಡುಗೆ ಅನನ್ಯ

Untitled-1
ಮುಳಬಾಗಿಲು ತಾಲೂಕಿನ ಮುದಿಗೆರೆ ಮಜರಾ ಗಡ್ಡೂರು ಗ್ರಾಪಂ ಗ್ರಂಥಾಲಯದ ಅರಿವು ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಗ್ರಂಥಪಾಲಕರ ದಿನಾಚರಣೆಯಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೆ ಸರಿತಾ, ಎಸ್​.ಡಿ.ಎ. ಶಶಿದರ್​, ಗ್ರಂಥಪಾಲಕ ನರಸಿಂಹಶೆಟ್ಟಿ, ಗ್ರಾಪಂ ಸದಸ್ಯ ಗಣೇಶ್​ ಇದ್ದರು.
Published on

ಮುಳಬಾಗಿಲು : ಡಾ.ಎಸ್​.ಆರ್​.ರಂಗನಾಥನ್​ ಅವರು ಗ್ರಂಥಾಲಯ ಗಣಿತ, ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಕಾಲ ಸೇವೆ ಮಾಡಿ ಪರಿಣಿತಿ ಪಡೆದಿದ್ದು, ಭಾರತೀಯ ಗ್ರಂಥಾಲಯ ವಿಜ್ಞಾನಕ್ಕೆ ಅದ್ಭುತ ಕೊಡುಗೆ ನೀಡಿದ್ದರಿಂದ ಭಾರತದಲ್ಲಿಯೇ ಗ್ರಂಥಾಲಯ ವಿಜ್ಞಾನದ ಪಿತಾಮಹ ಎಂಬ ಬಿರುದು ಪಡೆದಿದ್ದಾರೆ ಎಂದು ಮುದಿಗೆರೆ ಮಜರಾ ಗಡ್ಡೂರು ಗ್ರಾಪ ಪಿಡಿಒ ಕೆ.ಸರಿತಾ ತಿಳಿಸಿದರು. ಬೈರಕೂರು ಹೋಬಳಿ ಮುದಿಗೆರೆ ಮಜರಾ ಗಡ್ಡೂರು ಗ್ರಾಪಂ ಗ್ರಂಥಾಲಯದ ಅರಿವು ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗ್ರಂಥಪಾಲಕರ ದಿನಾಚರಣೆಯಲ್ಲಿ ಮಾತನಾಡಿದರು.

ಮುದಿಗೆರೆ ಮಜರಾ ಗಡ್ಡೂರು ಗ್ರಾಪಂ ಗ್ರಂಥಾಲಯದ ಅರಿವು ಕೇಂದ್ರದ ಗ್ರಂಥಪಾಲಕ ನರಸಿಂಹಶೆಟ್ಟಿ ಮಾತನಾಡಿ, ಗ್ರಂಥಾಲಯವೇ ದೇವಾಲಯ, ಪುಸ್ತಕಗಳೇ ದೇವರು ಎಂದು ನಂಬಿ ಗ್ರಂಥಗಳ ಜೋಡಣೆ ಮತ್ತು ವಿರತಣೆಯ ಬಗ್ಗೆ ಅಪಾರ ಆಸಕ್ತಿ ಗಮನಿಸಿ ಮದ್ರಾಸ್​ ವಿಶ್ವ ವಿದ್ಯಾಲಯ ಅವರನ್ನು ಗ್ರಂಥಾಲಯ ತರಬೇತಿಗಾಗಿ 1924ರ ಸೆ.24 ರಂದು ಇಂಗ್ಲೆಂಡಿನ ಲಂಡನ್​ ಸ್ಕೂಲ್​ ಆ್​ ಲೈಬ್ರೆರಿಯನ್​ ಎಂಬ ಶಿಕ್ಷಣಕ್ಕೆ ಕಳುಹಿಸಿಕೊಡಲಾಯಿತು ಎಂದರು. ಗ್ರಂಥಾಲಯ ಮತ್ತು ವಿಜ್ಞಾನಕ್ಕೆ ನೀಡಿದ ಅಪಾರ ಸೇವೆ ಗುರುತಿಸಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಘ&ಸಂಸ್ಥೆಗಳಲ್ಲಿ ಗುರುತಿಸಿ ಗೌರವಿಸಿದ್ದಾರೆ. 1957ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ತಿಳಿಸಿದರು.

ಕರವಸೂಲಿಗಾರ ನಾರಾಯಣಸ್ವಾಮಿ, ಸೋಮಶೇಖರ್​, ರಾಜಕುಮಾರ್​, ಗಡ್ಡೂರು ಯುವ ಮುಖಂಡ ಜಿ.ಎನ್​ ಶ್ರೀನಾಥ್​, ಜಿಕೆಎಂ ಹೇಮಲತಾ, ವಿಆರ್​ಡಬ್ಲ್ಯು ರತ್ನಮ್ಮ, ಜಲಗಾರ ಚಂದ್ರಶೇಖರ್​ ನಾಯ್ಡು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net