

ಮಂಡ್ಯ: ಈ ನಾಡು ಕಂಡ ಅಪರೂಪದ ಕಲಾವಿದ ಡಾ.ರಾಜಕುಮಾರ್ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು ಬಣ್ಣಿಸಿದರು.
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಕಸಾಪ ಜಿಲ್ಲೆ, ತಾಲೂಕು ಹಾಗೂ ನಗರ ಘಟಕದಿಂದ ಆಯೋಜಿಸಿದ್ದ ಡಾ.ರಾಜ್‌ಕುಮಾರ್ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು, ಡಾ.ರಾಜ್ ನಾಡಿಗೆ ಕೊಟ್ಟ ಕಾಣಿಕೆ, ಶ್ರೇ?್ಠತೆ ಸಾರ್ವಕಾಲಿಕ. ನಾಟಕ ರಂಗದಿಂದ ಕಲಾವಿದರಾಗಿ ಬಂದ ಡಾ.ರಾಜಕುಮಾರ್ ಪದ್ಮವಿಭೂ?ಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಅಪ್ರತಿಮ ಕಲಾವಿದ. ಅವರ ಪ್ರತಿ ಚಿತ್ರಗಳು ಸಾಮಾಜಿಕ ನ್ಯಾಯದ ಜತೆಗೆ ಉತ್ತಮ ಸಂದೇಶವನ್ನು ಸಾರುವ ಚಿತ್ರಗಳಾಗಿವೆ. ಕನ್ನಡ ನಾಡು ಹಾಗೂ ಭಾ?ೆಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರು ಅನ್ಯ ಭಾ?ೆಗಳಲ್ಲಿ ನಟಿಸಲು ಅವಕಾಶ ಸಿಕ್ಕರೂ ತಿರಸ್ಕರಿಸಿ ಕನ್ನಡದ ಶ್ರೇ?್ಠ ಕಲಾವಿದರಾಗಿ ಮೆರೆದಿದ್ದಾರೆ ಎಂದು ಪ್ರಶಂಸಿಸಿದರು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಜಿ.ಧನಂಜಯ ಧರಸಗುಪ್ಪೆ, ತಾ ಅಧ್ಯಕ್ಷರಾದ ಚಂದ್ರಲಿಂಗು, ಬಲ್ಲೇನಹಳ್ಳಿ ಮಂಜುನಾಥ, ನಗರಾಧ್ಯಕ್ಷೆ ಸುಜಾತಾ ಕೃ?್ಣ, ಶೋಭಾ, ರತ್ನಾ ಶಿವಣ್ಣ, ಶಶಿಮಣಿ, ಶಶಿಧರಸಬ್ಬನಹಳ್ಳಿ, ಮಂಚಶೆಟ್ಟಿ, ಎಂ.ಪೂರ್ಣಚಂದ್ರ ಇತರರಿದ್ದರು.