ಡಾ. ರಾಜ್ ಗಾನ ನಮನ

Published on

ಹುಬ್ಬಳ್ಳಿ: ಶ್ರೀನಿಧಿ ಫ್ಯಾಮಿಲಿ ಗಾರ್ಡನ್ ರೆಸ್ಟೊ ಮತ್ತು ಆರ್ವಿ ವೈಶಿಷ್ಟ್ಯಂ ಇವರ ಸಹಯೋಗದಲ್ಲಿ ಕನ್ನಡದ ಕಣ್ಮಣಿ ಡಾ. ರಾಜಕುಮಾರ ಅವರ ಸ್ಮರಣೆಗಾಗಿ ಡಾ. ರಾಜ್ -ಗಾನ ನಮನ ಕಾರ್ಯಕ್ರಮವನ್ನು ಏ. 27ರಂದು ಸಂಜೆ 4.30ಕ್ಕೆ ಉಣಕಲ್ಲನ ವೀರಭದ್ರೇಶ್ವರ ಕಾಲನಿಯಲ್ಲಿ ಏರ್ಪಡಿಸಲಾಗಿದೆ.

ಡಾ. ರಾಜಕುಮಾರ ಅವರೇ ಹಾಡಿದ ಚಿತ್ರಗಳಿಂದ ಆಯ್ದ ಮಧುರ ಹಾಡುಗಳನ್ನು ಹಾಡಿ ಅಭಿಮಾನದ ಸಮರ್ಪಣೆ ಮಾಡಲಾಗುವುದು.
ಬಂಟ ಸಮಾಜದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸುವರು.

ಹಿರಿಯ ಪತ್ರಕರ್ತ ಗಣಪತಿ ಗಂಗೋಳ್ಳಿ, ಈಶ್ವರಿ ಫೌಂಡೇಷನ್ ಸಂಸ್ಥಾಪಕ ಸಂತೋಷ ವೆರ್ಣೇಕರ್, ಆರ್.ಎಂ. ಗೋಗೇರಿ, ಶ್ಯಾಮ ಪೂಜಾರಿ, ಕಿಶೋರ ಅಮಿನ್ ಪಾಲ್ಗೊಳ್ಳುವರು ಎಂದು ರವೀಂದ್ರ ರಾಮದುರ್ಗಕರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net