ನಡೆ, ನುಡಿಯಲ್ಲಿ ನೈತಿಕತೆ ಪಾಲಿಸಿದ ಡಾ.ರಾಜ್​

FotoJet
Published on

ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಬಣ್ಣನೆ | ಡಾ.ರಾಜ್​ರತ್ನ ಪ್ರಶಸ್ತಿ ಪ್ರದಾನ

ತುಮಕೂರು: ಕಲಾವಿದರು, ಸಾಹಿತಿಗಳು, ರಾಜಕಾರಣಿಗಳ ನುಡಿ, ನಡೆಗಳಲ್ಲಿ ನೈತಿಕತೆ ಕಣ್ಮರೆಯಾಗುತ್ತಿರುವ ಈ ಕಾಲಟ್ಟದಲ್ಲಿ, ತಾವು ಬದುಕಿರುವಷ್ಟು ಕಾಲವು ನಡೆ, ನುಡಿಯಲ್ಲಿ ನೈತಿಕತೆಯನ್ನು ಉಳಿಸಿಕೊಂಡು, ಜನರ ಅಭಿರುಚಿ ಕೆಡಿಸದೆ ಕಲಾಸೇವೆ ಮಾಡಿದ ಮಹಾನ್​ ಕಲಾವಿದ ಡಾ.ರಾಜಕುಮಾರ್​ ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಬಣ್ಣಿಸಿದರು.

ನಗರದ ಕನ್ನಡ ಭವನದಲ್ಲಿ ಅಮರಜೋತಿ ಸಾಂಸತಿಕ ಟ್ರಸ್ಟ್​ ದಿಬ್ಬೂರು ಭಾನುವಾರ ಆಯೋಜಿಸಿದ್ದ ಡಾ.ರಾಜ್​ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಗಂಗಾಧರ ಮೊದಲಿಯಾರ್​ ಮತ್ತು ಸಂಗೀತ ನಿರ್ದೇಶಕ ಐ.ಎಲ್​.ರಂಗಸ್ವಾಮಯ್ಯ ಅವರಿಗೆ 2025ನೇ ಸಾಲಿನ ಡಾ.ರಾಜರತ್ನ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಚಮ್ಮಾರನಿಂದ ಹಿಡಿದು ಚಕ್ರವರ್ತಿಯವರೆಗೆ ಎಲ್ಲ ರೀತಿಯ ಪಾತ್ರಗಳನ್ನು ಮಾಡುವ ಮೂಲಕ ಎಲ್ಲ ವರ್ಗದ ಜನರನ್ನು ಪ್ರತಿನಿಧಿಸಿದ ಏಕೈಕ ಕಲಾವಿದ ಡಾ.ರಾಜ್​ ಎಂದರು.

ಕನ್ನಡ ಕಲಾವಿದರಲ್ಲಿ ಜಾತಿ ಮೀರಿ ಕಲಿತವರು, ಕಲಿಸಿದವರು ಇದ್ದಾರೆ. ಇದೇ ನಿಜವಾದ ಅಂತ@ಸತ್ವ. ಆದರೆ, ರಾಜಕುಮಾರ್​ ಎಂದಿಗೂ ತಾರಮೌಲ್ಯವನ್ನು ತಲೆಗೆ ಏರಿಸಿಕೊಳ್ಳದೆ ಅದನ್ನು ಪ್ರೇಕ್ಷಕರ ಹೃದಯಕ್ಕೆ ತಲುಪಿಸಿದವರು. ಹಾಗಾಗಿ, ಅವರು ಚಲನಚಿತ್ರರಂಗದಲ್ಲಿ ರಾಜಕುಮಾರ್​ ಆಗಿದ್ದರೂ, ಪ್ರೇಕ್ಷಕರ ಪಾಲಿಗೆ ಮುತ್ತುರಾಜ್​ ಆಗಿಯೇ ಉಳಿದರು.1968ಕ್ಕೆ ಡಾ.ರಾಜ್​ ಕನ್ನಡ ಚಿತ್ರರಂಗ ಪ್ರವೇಶಿಸಿದ ನಂತರ ಚಲನಚಿತ್ರ ತಯಾರಿಕಾ ವೇಗ ಹೆಚ್ಚಳವಾಯಿತು. ಕನ್ನಡ ಚಲನಚಿತ್ರವನ್ನು ಏಕಾಂಗಿಯೇ ಹೆಗಲ ಮೇಲೆ ಹೊತ್ತು ಬೆಳೆಸಿದ ಕೀರ್ತಿ ಡಾ.ರಾಜ್​ಗೆ ಸಲ್ಲುತ್ತದೆ. ಜನರಿಗೆ ಕೆಟ್ಟ ಸಿನಿಮಾಗಳನ್ನು ನೀಡಿ ಮೋಸ ಮಾಡಲಿಲ್ಲ. ಜನರ ಸದಭಿರುಚಿ ಬೆಳೆಸಿದವರು ಡಾ.ರಾಜ್​ ಎಂದು ತಿಳಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗಂಗಾಧರ ಮೊದಲಿಯಾರ್​, ಕನ್ನಡ ಸಿನಿಮಾ ಪ್ರೇಕ್ಷಕರಿಂದ ಮರೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಅಮರಜೋತಿ ಸಾಂಸತಿಕ ಟ್ರಸ್ಟ್​ ಡಾ.ರಾಜ್​ರತ್ನ ಹೆಸರಿನಲ್ಲಿ ಪ್ರಶಸ್ತಿ ನೀಡುವ ಮೂಲಕ ಅವರನ್ನು ನೆನಪಿಸುವ ಕೆಲಸ ಮಾಡುತ್ತಿದೆ. ಇದೊಂದು ಒಳ್ಳೆಯ ಕೆಲಸ. ಈ ಪ್ರಶಸ್ತಿ ಮತ್ತಷ್ಟು ಅರ್ಹರಿಗೆ ತಲುಪವಂತಾಗಲಿ ಎಂದರು.

ಅಮರಜೋತಿ ಸಾಂಸತಿಕ ಟ್ರಸ್ಟ್​ನ ದಿಬ್ಬೂರು ಮಂಜು ಪ್ರಾಸ್ತಾವಿಕ ಮಾತಗಳನ್ನಾಡಿದರು. ಚಲನಚಿತ್ರ ನಿಮಾರ್ಪಕ ಚಿಂದೋಡಿ ಬಂಗಾರೇಶ್​, ಹರಿಕಥಾ ವಿದ್ವಾನ್​ ಡಾ.ಲಕ್ಷ$್ಮಣದಾಸ್​, ಕಸಾಪ ಅಧ್ಯಕ್ಷ ಕೆ.ಎಸ್​.ಸಿದ್ದಲಿಂಗಪ್ಪ ಮತ್ತಿತರರು ಉಪಸ್ತಿತರಿದ್ದರು.

ವಿವಿಧ ಪ್ರಶಸ್ತಿ: ಕಸಾಪ ಮಾಜಿ ಅಧ್ಯೆ ಬಾ.ಹ.ರಮಾಕುಮಾರಿ, ಹಾರೋನ್ಮಿಯಂ ವಾದಕ ಬಿ.ಎಸ್​.ಶ್ರೀನಿವಾಸಮೂರ್ತಿ, ತಬಲವಾದಕ ಎಂ.ಪಿ.ಪುಟ್ಟಶಾಮಯ್ಯ, ನಾಗಾರ್ಜುನ ಕಲಾ ಸಂಘದ ಸಂಸ್ಥಾಪಕ ಕೆ.ಸಿ.ನರಸಿಂಹಮೂರ್ತಿ, ಹಿರಿಯ ಗಾಯಕ ಎ.ಎನ್​.ನಾರಾಯಣಪ್ರಸಾದ್​,ಸಂಗೀತ ನಿರ್ದೇಶಕ ಸಂಗೀತ್​ ಶ್ರೀನಿವಾಸ್​, ಈಶ್ವರಿ ಮಹಿಳಾ ಸಮಾಜದ ಆಧ್ಯೆ ಎಂ.ಆರ್​.ರಂಗಮ್ಮ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net