ಡಾ. ರಾಜ್​ ಸಾಂಸತಿಕ ಲೋಕದ ದಂತ ಕಥೆ

Dr Raj A legend from the cultural world
ನಾಗಠಾಣ ಗ್ರಾಮದ ಅರಿವು ಕೇಂದ್ರದಲ್ಲಿ ಡಾ. ರಾಜಕುಮಾರ 96ನೇ ಜಯಂತಿ ಆಚರಿಸಲಾಯಿತು. ಸಂತೋಷ ಬಂಡೆ, ಮಂಜುನಾಥ ಗಂಗನಳ್ಳಿ, ಬಸವರಾಜ ಸಾರವಾಡ ಮತ್ತಿತರರಿದ್ದಾರೆ.
Published on

ವಿಜಯಪುರ: ಕನ್ನಡದ ವರನಟ ಡಾ. ರಾಜಕುಮಾರ ಆವರು ಕನ್ನಡ ಸಾಂಸತಿಕ ಲೋಕದ ದಂತ ಕಥೆ. ಅವರು ಕಲೆಯ ಜತೆಗೆ ಕನ್ನಡದ ಜನತೆಗೂ ಬದ್ಧರಾಗಿ ಬದುಕಿದವರು ಎಂದು ಸಾಹಿತಿ ಸಂತೋಷ ಬಂಡೆ ಹೇಳಿದರು.

ತಾಲೂಕಿನ ನಾಗಠಾಣ ಗ್ರಾಮದ ಅರಿವು ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಡಾ. ರಾಜಕುಮಾರ 96ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್​ ಕುಮಾರ ಅಭಿನಯಿಸಿದ ಕನ್ನಡ ಚಿತ್ರಗಳು ಸಾಂಸತಿಕ, ಸಾಮಾಜಿಕ ವಿವೇಕದ ರೂಪಕಗಳಾಗಿವೆ ಎಂದರು.

ಗ್ರಂಥಪಾಲಕ ಮಂಜುನಾಥ ಗಂಗನಳ್ಳಿ ಮಾತನಾಡಿ, ರಾಜಕುಮಾರ ಅಭಿನಯದ ಚಿತ್ರಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರಗಳಾಗಿರುತ್ತಿದ್ದವು. ಜೀವನ ಚೈತ್ರ ಚಿತ್ರದ ಮೂಲಕ ಸಾರಾಯಿ ಪಿಡುಗಿನ ವಿರುದ್ಧ, ಆಕಸ್ಮಿಕ ಚಿತ್ರದ ಮೂಲಕ ಹೆಣ್ಣಿನ ಶೋಷಣೆಯ ವಿರುದ್ಧ, ಶಬ್ದವೇಧಿ ಚಿತ್ರದ ಮೂಲಕ ಮಾದಕ ವ್ಯಸನಗಳ ವಿರುದ್ಧ ಹೋರಾಡುವ ಪಾತ್ರದಲ್ಲಿ ಅಭಿನಯಿಸಿದ್ದ ಅವರು, ನಿಜ ಜೀವನದಲ್ಲಿಯೂ ಕೂಡ ಸಾಮಾಜಿಕ ಕಳಕಳಿ ಹೊಂದಿದ್ದರು ಎಂದರು.

ಗ್ರಾಮದ ಬಸವರಾಜ ಸಾರವಾಡ, ಗಿರಮಲ್ಲ ಹೊಸಟ್ಟಿ, ಪ್ರವಿಣ ಕತ್ನಳ್ಳಿ, ಶಿವಾನಂದ ಹಂಜಗಿ, ಯುವರಾಜ ಪವಾರ, ಆನಂದ ಗಂಗನಳ್ಳಿ, ಮಲ್ಲಿಕಾರ್ಜುನ ಕತ್ನಳ್ಳಿ, ಆನಂದ ಅರಕೇರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net