ಪುನೀತ್‌ರಾಜ್‌ಕುಮಾರ್ ಕೊಡುಗೆ ಸ್ಮರಿಸಿ: ಚಿತ್ರ ನಿರ್ಮಾಪಕ ವೈ.ಎಸ್.ಶಂಕರೇಗೌಡ ಹೇಳಿಕೆ

Dr.Puneethrajkumar Smarane mandya
Published on

ಮಂಡ್ಯ: ನಟ ಪುನೀತ್‌ರಾಜ್‌ಕುಮಾರ್ ಸಮಾಜಕ್ಕೆ ಕೊಟ್ಟ ಕೊಡುಗೆಯನ್ನು ಸ್ಮರಿಸುವುದು ಅತ್ಯವಶ್ಯಕ ಎಂದು ಚಿತ್ರ ನಿರ್ಮಾಪಕ ವೈ.ಎಸ್.ಶಂಕರೇಗೌಡ ಹೇಳಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಡಾ.ಪುನೀತ್‌ರಾಜ್‌ಕುಮಾರ್ ಅವರ 2ನೇ ವರ್ಷದ ಪುಣ್ಯಸ್ಮರಣೆ ಮತ್ತು ರೈತರಿಗೆ ತೆಂಗಿನ ಸಸಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಹೂಪಯೋಗಿ ಶ್ರೇಷ್ಠತೆ ಪಡೆದುಕೊಂಡಿರುವ ಕಲ್ಪವೃಕ್ಷ ಸಸಿಗಳನ್ನು ವಿತರಿಸಿ ಪುನೀತ್‌ರಾಜ್‌ಕುಮಾರ್ ಅವರನ್ನು ಸ್ಮರಿಸಿಕೊಳ್ಳುತ್ತಿರುವುದು ಶ್ಲಾಘನೀಯ. ಸರಳ ವ್ಯಕ್ತಿತ್ವವುಳ್ಳ ಅವರು ಯಾರಿಗೂ ತಿಳಿಯದಂತೆ ಸಾಕಷ್ಟು ಸಮಾಜಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಹೇಳಿದರು.

ಕರವೇ ಜಿಲ್ಲಾಧ್ಯಕ್ಷ ಕೆ.ಟಿ.ಶಂಕರೇಗೌಡ ಮಾತನಾಡಿ, ಸಸಿ ಪಡೆದುಕೊಂಡ ರೈತರು ಪುನೀತ್ ರಾಜ್‌ಕುಮಾರ್ ಹೆಸರಿಟ್ಟು ಚೆನ್ನಾಗಿ ಪೋಷಿಸಬೇಕು ಎಂದು ಹೇಳಿದರು.

ಉದ್ಯಮಿ ಜಗನ್ನಾಥಶೆಟ್ಟಿ, ಕರವೇ ಪದಾಧಿಕಾರಿಗಳಾದ ಭಾರತಿ, ಡಿ.ಅಶೋಕ್, ಕಾಮಧೇನು ರಮೇಶ್, ಬೋರೇಗೌಡ, ಮಹೇಶ್, ಸತೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net