ಜನ ಮನಗಳಲ್ಲಿ ನೆಲಸಿದ್ದಾರೆ ಅಪ್ಪು: ಸಮಾಜ ಸೇವಕ ಮಹಾಂತೇಶ ಪೂಜಾರಿ ಹೇಳಿಕೆ

17 Arakera Photo 02
ಅರಕೇರಾ ಪುನೀತ್ ರಾಜಕುಮಾರ ವೃತ್ತದಲ್ಲಿ 49ನೇ ಅಪ್ಪು ಜನ್ಮದಿನದ ನಿಮಿತ್ತ ಅಭಿಮಾನಿಗಳು ವೃದ್ಧೆಗೆ ಬಾಳೆಹಣ್ಣು ವಿತರಿಸಿದರು. ಪ್ರಮುಖರಾದ ಮಹಾಂತೇಶ ಪೂಜಾರಿ, ಹನುಮಂತ್ರಾಯ ಪೂಜಾರಿ, ಸಿದ್ದಯ್ಯ ಸ್ವಾಮಿ ಮಠಪತಿ, ತನೋಜ ಕುಮಾರ, ರಂಗಪ್ಪ ಪೂಜಾರಿ, ನಾಗರಾಜ ದೇವರಮನಿ, ತಿಮ್ಮಣ್ಣ ನಾಯಕ ಜಲ್ಲೆ, ಶರಣ ಬೇರಿ, ಬಸವರಾಜ ಗುತ್ತೆದಾರ, ಕಿಷ್ಟಪ್ಪ ಡ್ರೈವರ್, ಹನುಮಂತ್ರಾಯ ನಾಯಕ ಗುಜುಪ್ ಇದ್ದರು.
Published on

ಅರಕೇರಾ: ಅಪ್ಪು ನೊಂದವರ, ಬಡವರ, ನಿರ್ಗತಿಕರ, ಅಸಂಘಟಿತರ ಕಷ್ಟಕ್ಕೆ ಸ್ಪಂದಿಸುವ ಮೂಲಕ ಹೆಸರುವಾಸಿಯಾಗಿದ್ದರು ಎಂದು ಸಮಾಜ ಸೇವಕ, ಅಪ್ಪು ಸೇವಾ ರತ್ನ ಪ್ರಶಸ್ತಿ ಪುರಸ್ಕೃತ ಮಹಾಂತೇಶ ಪೂಜಾರಿ ಹೇಳಿದರು.


ಇಲ್ಲಿನ ಡಾ.ಪುನೀತ್ ರಾಜಕುಮಾರ ವೃತ್ತದಲ್ಲಿ 49ನೇ ಅಪ್ಪು ಜನ್ಮದಿನದ ಅಂಗವಾಗಿ ಕೇಕ್ ಕತ್ತರಿಸಿ ಹಾಗೂ ಜನರಿಗೆ ಬಾಳೆಹಣ್ಣು ವಿತರಿಸಿ ಮಾತನಾಡಿದರು.
ಅಪ್ಪು ಕರ್ನಾಟಕದ ಮನೆ ಮನಗಳಲ್ಲಿ ನಂದಾದೀಪವಾಗಿದ್ದಾರೆ. ದೈಹಿಕವಾಗಿ ಅವರು ಮರೆಯಾಗಿರಬಹುದು. ಸದಾ ಅಭಿಮಾನಿಗಳ ಮನಸ್ಸಿನಲ್ಲಿ ನೆಲೆಸುವಂತ ಕೆಲಸಗಳು ಮಾಡಿದ್ದಾರೆ. ಅಪ್ಪು ದೇಶದಲ್ಲಿಯೇ ಅತಿ ಹೆಚ್ಚು ಅಭಿಮಾನಿಗಳನ್ನು ಒಳಗೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಪುನೀತ್ ನೂರಾರು ಅಭಿಮಾನಿಗಳು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬಡ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಿದರು. ಪ್ರಮುಖರಾದ ಹನುಮಂತ್ರಾಯ ಪೂಜಾರಿ, ಸಿದ್ದಯ್ಯ ಸ್ವಾಮಿ ಮಠಪತಿ, ತನೋಜ ಕುಮಾರ, ರಂಗಪ್ಪ ಪೂಜಾರಿ, ನಾಗರಾಜ ದೇವರಮನಿ, ತಿಮ್ಮಣ್ಣ ನಾಯಕ ಜಲ್ಲೆ, ಶರಣ ಬೇರಿ, ಬಸವರಾಜ ಗುತ್ತೆದಾರ, ಕಿಷ್ಟಪ್ಪ ಡ್ರೈವರ್, ಹನುಮಂತ್ರಾಯ ನಾಯಕ ಗುಜುಪ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net