

ಹೊಸಪೇಟೆ: ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅವರ 48ನೇ ಜನ್ಮದಿನದ ನಿಮಿತ್ತ ಪುನೀತ್ ಅಭಿಮಾನಿಗಳು, ಅಪ್ಪು ಮಾಲೆ ಧಾರಿಗಳಿಂದ ನಗರದಲ್ಲಿ ಪ್ರಮುಖ ಬಿದಿಯಲ್ಲಿ ಭಾವಚಿತ್ರದ ಮೆರವಣಿಗೆ ಜರುಗಿತು.
ಇಲ್ಲಿನ ಶ್ರೀ ವಡಕರಾಯ ದೇವಸ್ಥಾನದಿಂದ ಸಂಜೆ ಆರಂಭವಾದ ಮೆರವಣಿಗೆ ಮೇನ್‌ಬಜಾರ್, ಪಾದಗಟ್ಟಿ ಆಂಜನೇಯ, ಗಾಂಧಿಚೌಕು, ಸಂಗೋಳ್ಳಿರಾಯಣ್ಣ ವೃತ್ತ, ಪುಣ್ಯಮೂರ್ತಿ ವೃತ್ತ, ಕೇಂದ್ರ ಬಸ್‌ನಿಲ್ದಾಣದಿಂದ ಡಾ.ಪುನೀತ್ ವಋತತದ ವರೆಗೆ ಮೆರವಣಿಗೆ ನಡೆಯಿತು. ರಸ್ತೆಯದ್ದಕ್ಕೂ ಊಟದ ಪೊಟ್ಟಣ ವಿತರಿಸಿದರು. ಪುನೀತ್ ರಾಜ್‌ಕುಮಾರ್ ಅವರ ತತ್ವಗಳು ಹಾಗೂ ಅವರ ಹಾಡುಗಳನ್ನು ಹಾಕಿ ಸಂಭ್ರಮಿಸಿದರು. ನಂತರ ಪುನೀತ್ ಪುತ್ತಳಿಗೆ ವಿಶೇಷ ಪೂಜೆ ಸಲ್ಲಿಸಿ ಗೌರವಿಸಿದರು.
ದಿನವಿಡೀ ಪೂಜೆ: ಅಪ್ಪು ಅಭಿಮಾನಿಗಳು ಪುನೀತ್ ಪುತ್ಥಳಿಗೆ ದಿನವಿಡೀ ಪೂಜೆ ಸಲ್ಲಿಸಿದರು. ಪುನೀತ್ ಸರ್ಕಲ್ ಮಾತ್ರವಲ್ಲದೇ ಸಂಗೊಳ್ಳಿ ರಾಯಣ್ಣ ಸರ್ಕಲ್, ಜಿಲ್ಲಾ ಕ್ರೀಡಾಂಗಣದ ಹೊರ ಭಾಗದಲ್ಲೂ ಅಪ್ಪು ಭಾವಚಿತ್ರವನ್ನಿರಿಸಿ, ಪೂಜೆ ಸಲಿಸಿದರು. ಮಧ್ಯಹ್ನ ಪುನೀತ್ ಸರ್ಕಲ್‌ನಲ್ಲಿ ಅಭಿಮಾನಿಗಳು ಸಾರ್ವಜನಿಕರಿಗೆ ಚಿತ್ರಾಹ್ನ, ಪಲಾವ್, ರೈಸ್‌ಬಾತ್, ಐಸ್‌ಕ್ರೀಮ್ ವಿತರಿಸಿದರು.